ಅಥಣಿ: ಹೋಳಿ ಹಬ್ಬದ ಸಂಭ್ರಮಾಚರಣೆ ವೇಳೆ ಅಪಘಾತ ಸಂಭವಿಸಿ ವ್ಯಕ್ತಿವೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ, ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.
ಬಣ್ಣದ ಆಟಕ್ಕೆ ಓರ್ವ ಬಲಿ... ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಡಿಕ್ಕಿ - ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಾರು ಡಿಕ್ಕಿ
ಅಥಣಿಯಲ್ಲಿ ಹೋಳಿ ಹಬ್ಬದ ಆಚರಣೆ ವೇಳೆ ಬಣ್ಣ ಎರಚುವವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಕಾರು ಡಿಕ್ಕಿ
ಗುಂಡೇವಾಡಿ ಗ್ರಾಮದ ನಿವಾಸಿ ಕುಮಾರ ಮುರಗೆಪ್ಪ ಗುರುಪಾದಗೋಳ(34) ಮೃತ ವ್ಯಕ್ತಿ. ಬಣ್ಣ ಎರಚುವವರಿಂದ ತಪ್ಪಿಸಿಕೊಂಡು ಓಡುವ ವೇಳೆ, ಮಹಾರಾಷ್ಟ್ರದ ಜತ್ತ್ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಮುರಗೆಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.