ಕರ್ನಾಟಕ

karnataka

ETV Bharat / state

ಸಿಎಂಗೆ ಕೊರೊನಾ ತಗುಲಿದ ಹಿನ್ನೆಲೆ.. ಸಚಿವರು ಸೇರಿ 70ಕ್ಕೂ ಅಧಿಕ ಸ್ವಾಮೀಜಿಗಳಿಗೆ ಆತಂಕ - ನಾಗನೂರು ಮಠಕ್ಕೆ ಭೇಟಿ ನೀಡಿದ್ದ ಸಿ ಎಂ ಬಿಎಸ್​ವೈ

ಕೇಂದ್ರ ಸಚಿವ ಪ್ರಲ್ಹಾದ್ ‌ಜೋಶಿ, ಬಿಎಸ್‌ವೈ ಸಂಪುಟದ ಜಗದೀಶ್ ‌ಶೆಟ್ಟರ್, ಉಮೇಶ್ ಕತ್ತಿ, ಮುರಗೇಶ ನಿರಾಣಿ ಹಾಗೂ ಶಾಸಕ ಅನಿಲ್ ಬೆನಕೆ, ಡಾ. ಪ್ರಭಾಕರ ಕೋರೆ ಅವರು ಸಿಎಂ ಯಡಿಯೂರಪ್ಪನವರ ಅಕ್ಕಪಕ್ಕದಲ್ಲಿ ಕುಳಿತಿದ್ದರು..

c-m-bsy
ಸಿ ಎಂ ಬಿ ಎಸ್ ಯಡಿಯೂರಪ್ಪ

By

Published : Apr 16, 2021, 8:50 PM IST

ಬೆಳಗಾವಿ :ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಕೆಲ ಸಚಿವರು ಸೇರಿ 70ಕ್ಕೂ ಅಧಿಕ ಸ್ವಾಮೀಜಿಗಳ ಆತಂಕಕ್ಕೆ ಕಾರಣವಾಗಿದೆ.

ನಿನ್ನೆ ಬೆಳಗ್ಗೆ ನಾಗನೂರು ಮಠಕ್ಕೆ ಭೇಟಿ ನೀಡಿದ್ದ ಸಿಎಂ ಬಿಎಸ್​ವೈ ಡಾ. ಸಿದ್ಧರಾಮ ಸ್ವಾಮೀಜಿಯಿಂದ ಆಶೀರ್ವಾದ ‌ಪಡೆದು ಕೆಲ ಹೊತ್ತು ಚರ್ಚಿಸಿದ್ದರು. ನಂತರ ಬೆಳಗಾವಿಯ ಹುಕ್ಕೇರಿ ‌ಹಿರೇಮಠದಲ್ಲಿ ಆಯೋಜಿಸಿದ್ದ ಸುದರ್ಶನ ಹೋಮದಲ್ಲಿಯೂ ಭಾಗಿಯಾಗಿದ್ದರು. ಈ ವೇಳೆ 70ಕ್ಕೂ ಅಧಿಕ ಸ್ವಾಮೀಜಿಗಳನ್ನು ಏಕಕಾಲಕ್ಕೆ ‌ಭೇಟಿಯಾಗಿದ್ದರು.

ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದ ಸಿಎಂ ಬಿಎಸ್​ವೈ

ಅಲ್ಲದೆ, ಸಚಿವರಾದ ಪ್ರಲ್ಹಾದ್ ‌ಜೋಶಿ, ಜಗದೀಶ್ ‌ಶೆಟ್ಟರ್, ಉಮೇಶ್ ಕತ್ತಿ, ಮುರಗೇಶ ನಿರಾಣಿ, ಶಾಸಕ ಅನಿಲ್ ಬೆನಕೆ, ಡಾ. ಪ್ರಭಾಕರ ಕೋರೆ ಅವರು ಸಿಎಂ ಯಡಿಯೂರಪ್ಪನವರ ಅಕ್ಕಪಕ್ಕದಲ್ಲಿ ಕುಳಿತಿದ್ದರು.

ನಂತರ ರೋಡ್ ಶೋ ನಡೆಸುವಾಗ ಸಿಎಂಗೆ ಜ್ವರ ಕಾಣಿಸಿದ್ದರಿಂದ ‌ಯುಕೆ 27 ಹೋಟೆಲ್‌ಗೆ ಮರಳಿ ಸಂಜೆವರೆಗೆ ವಿಶ್ರಾಂತಿ ‌ಪಡೆದಿದ್ದರು. ನಂತರ ವಿಶೇಷ ‌ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೊನ್ನೆಯೂ ಸಿಎಂ ಅರಬಾವಿ ‌ಹಾಗೂ ಗೋಕಾಕ್​ನಲ್ಲಿ ಪ್ರಚಾರ ನಡೆಸಿ ಹಲವರ ಸಂಪರ್ಕಕ್ಕೆ ಬಂದಿದ್ದರು.

ಓದಿ:ಕೋವಿಡ್ ಹೆಚ್ಚಳ, ವಿಕ್ಟೋರಿಯಾದಲ್ಲಿ 900ಕ್ಕೂ ಅಧಿಕ ಹಾಸಿಗೆ ವ್ಯವಸ್ಥೆ: ಸಚಿವ ಸುಧಾಕರ್

For All Latest Updates

ABOUT THE AUTHOR

...view details