ಕರ್ನಾಟಕ

karnataka

ETV Bharat / state

ಅಥಣಿ ಉಪಸಮರ: ಜನವಾಡ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ - athani news

ಕೃಷ್ಣಾ ನದಿ ಪ್ರವಾಹದಿಂದ ಹಾನಿಗೀಡಾದ ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ.

ಜನವಾಡ ಗ್ರಾಮಸ್ಥರಿಂದ ಉಪಚುನಾವಣೆ ಮತದಾನ ಬಹಿಷ್ಕಾರ

By

Published : Nov 17, 2019, 9:44 PM IST

ಬೆಳಗಾವಿ:ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಈ ಬಾರಿ ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ

ಜನವಾಡ ಗ್ರಾಮಸ್ಥರಿಂದ ಉಪಚುನಾವಣೆ ಮತದಾನ ಬಹಿಷ್ಕಾರ

ಜನವಾಡ ಗ್ರಾಮಕ್ಕೆ ಕೃಷ್ಣಾ ನದಿ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ, ಜಿಲ್ಲಾಡಳಿತ ನಮಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಬೆಳೆ ಪರಿಹಾರ ಅಂತ ಇದುವರೆಗೂ ಒಂದೇ ಒಂದು ರೂಪಾಯಿ ಬಂದಿಲ್ಲ. ತುರ್ತಾಗಿ ಕೊಡಬೇಕಾಗಿದ್ದ 10,000 ರೂಪಾಯಿ ಕೂಡ ಬಂದಿಲ್ಲ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಎ,ಬಿ,ಸಿ, ಗ್ರೂಪ್​ನಲ್ಲಿ ತಾರತಮ್ಯದ ಜೊತೆಗೆ ಸರ್ವೆ ಕಾರ್ಯದಲ್ಲಿ ತಾರತಮ್ಯ ಎಸಗಿದ್ದಾರೆ.

ಹೀಗಾಗಿ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಗ್ರಾಮದಲ್ಲಿ ಒಟ್ಟು 3,300 ಮತದಾರರಿದ್ದಾರೆ. ನಾವೆಲ್ಲ ಮತದಾನ ತಿರಸ್ಕಾರ ಮಾಡಿ, ಗ್ರಾಮಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಯಾವುದೇ ರಾಜಕೀಯ ಅಭ್ಯರ್ಥಿ ಪ್ರಚಾರಕ್ಕೆ ಬರದ ಹಾಗೆ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details