ಕರ್ನಾಟಕ

karnataka

ETV Bharat / state

'ಅಧಿಕಾರಕ್ಕಾಗಿ ರಾಜೀನಾಮೆ ನೀಡುವ ರಾಜಕಾರಣಿಗಳಿಂದ್ಲೇ ಉಪಚುನಾವಣಾ ವೆಚ್ಚ ಭರಿಸಿ'

ಅಧಿಕಾರದ ಆಸೆಗಾಗಿ ಮನಸೋ ಇಚ್ಛೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಜನಪ್ರತಿನಿಧಿಗಳಿಂದಲೇ ಚುನಾವಣಾ ವೆಚ್ಚವನ್ನು ಭರಿಸಿಕೊಳ್ಳುವ ನೂತನ ಕಾನೂನು ಜಾರಿಗೆ ತರಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

Social worker Bhimappa Gadada
ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ

By

Published : Jul 4, 2021, 5:15 PM IST

ಬೆಳಗಾವಿ:ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಸರ್ಕಾರ 13.54 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದು, ಸಾರ್ವಜನಿಕರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಹಣವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದೆ‌. ಯಾವುದೇ ಪ್ರತಿನಿಧಿಗಳು ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ್ದಲ್ಲಿ, ಚುನಾವಣೆಗೆ ತಗಲುವ ವೆಚ್ಚವನ್ನು ಅವರಿಂದಲೇ ಭರಿಸಿಕೊಳ್ಳುವ ಕಾನೂನು ಜಾರಿಗೆ ತರುವಂತೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಗಡಾದ, ಇತ್ತಿಚೇಗೆ ಜರುಗಿದ ಬೆಳಗಾವಿ ಉಪಚುನಾವಣೆ ವೇಳೆ ಸರ್ಕಾರ 13 ಕೋಟಿ ರೂ.ಗಳನ್ನು ವೆಚ್ಚ ಮಾಡುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡಿದೆ. ಪ್ರತಿ ಮತಗಟ್ಟೆಗಳಿಗೂ ಎಲ್ಲ ಸೌಕರ್ಯ ಜತೆಗೆ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಆದರೂ‌, ಲೋಕಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗಳಿಗೆ ತಲಾ 33 ಸಾವಿರ ಹಣವನ್ನು ಜಿಲ್ಲಾಡಳಿತ ಯಾಕೆ? ಬಿಡುಗಡೆ ಮಾಡಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.

ನಿರ್ಮಿತಿ ಕೇಂದ್ರದ ಹೆಸರಿನಲ್ಲಿ ಒಂದು ಕೋಟಿ ರೂ. ಹಣವನ್ನು ಕೊಡಲಾಗಿದ್ದು, ಒಂದು ಕೋಟಿ ಹಣದಲ್ಲಿ ಎಲ್ಲಿ?, ಯಾವ ಕಾರ್ಯ ಮಾಡಿದ್ದಾರೆ? ಎನ್ನುವುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ಇತ್ತ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಯಾವುದೇ ಸ್ಥಾನ ತೆರವು ಆದರೆ ಮಾತ್ರ ಸರ್ಕಾರ ಚುನಾವಣೆ ವೆಚ್ಚ ಭರಿಸಬೇಕು. ಆದರೆ, ಅಧಿಕಾರದ ಆಸೆಗಾಗಿ ಮನಸೋ ಇಚ್ಛೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಾಗುಂತೆ ಮಾಡುವ ಜನಪ್ರತಿನಿಧಿಗಳಿಂದ ಸರ್ಕಾರ ಚುನಾವಣಾ ವೆಚ್ಚವನ್ನು ಭರಿಸಿಕೊಳ್ಳುವ ನೂತನ ಕಾನೂನು ಜಾರಿಗೆ ತರುವಂತೆ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

ABOUT THE AUTHOR

...view details