ಗೋಕಾಕ: ಗೋಕಾಕ್ ಮತದಾರರು ಅಶೋಕ ಪೂಜಾರಿಗೆ ಆಶೀರ್ವದ ಮಾಡಿ ಗೆಲ್ಲಿಸಬೇಕು ಎನ್ನುತ್ತಿದ್ದಂತೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಮಾಜಿ ಸಚಿವ ಕಾಶೆಂಪೂರ ಮಾತನಾಡುವಾಗ ಕಣ್ಣೀರಿಟ್ಟ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ - ಗೋಕಾಕ್ ಉಪಚುನಾವಣೆ ಪ್ರಚಾರ
ಗೋಕಾಕ್ ಉಮಚುನಾವಣೆ ಪ್ರಚಾರವನ್ನು ಸೋಮವಾರದಿಂದ ಪ್ರಾರಂಭಿಸುತ್ತೇನೆ. ಗೋಕಾಕ್ ಸಮಗ್ರ ಅಭಿವೃದ್ಧಿಯೇ ಮೊದಲ ಆದ್ಯತೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು.
ನಗರದ ಜ್ಞಾನ ಮಂದಿರದಲ್ಲಿ ಮಾತನಾಡಿದ ಪೂಜಾರಿ ಅವರು, ಬಿಜೆಪಿಯವರು ನನ್ನ ಆಪ್ತರಿಂದ ನನ್ನ ಮೇಲೆ ಒತ್ತಡ ಹೇರಿಸಿ ಅವಿರೋಧವಾಗಿ ಆಯ್ಕೆಯಾಗಲು ಹುನ್ನಾರ ನಡೆಸಿದ್ದರು. ವ್ಯವಸ್ಥೆ ಬದಲಿಸುವ ನನ್ನ ಸಂಕಲ್ಪವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಲ್ಲಿನ ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ ಹಾಗೂ ದಮನಕಾರಿ ನೀತಿ ವಿರುದ್ಧ ಕೊನೆಯವರೆಗೂ ಹೋರಾಡುತ್ತೇನೆ ಎಂದರು.
ಮನೆಯಿಂದಲೇ ಪ್ರಚಾರ: ನಮ್ಮ ಮನೆಯಿಂದಲೇ ಪ್ರಚಾರ ಕೈಗೊಳ್ಳಲು ಸಿದ್ಧತೆ ನಡೆಸಿದ್ದೇವೆ. ಸೋಮವಾರ ಬೆಳಗ್ಗೆಯಿಂದ ಎಲ್ಲ ಮತದಾರರ ಮುಂದೆ ನನ್ನ ಉದ್ದೇಶ, ಗುರಿಗಳನ್ನು ಬಿಚ್ಚಿಡುತ್ತೇನೆ. ಶಾಸಕನಾದವರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೊದಲ ಆದ್ಯತೆಯಾಗಬೇಕು ಎಂದು ಹೇಳಿದರು.