ಬೆಳಗಾವಿ:ಉಪಚುನಾವಣೆ ಘೋಷಣೆ ಬೆನ್ನಲ್ಲೇ ರಾಜ್ಯ ಕೈ ನಾಯಕರು ಅಥಣಿ ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಅಖಾಡಕ್ಕಿಳಿದಿದ್ದಾರೆ.
ಅಥಣಿಯ ಅಖಾಡಕ್ಕಿಳಿದ ಎಂ.ಬಿ.ಪಾಟೀಲ್... ಮಂಗಸೂಳಿ ಪರ ಮತಯಾಚನೆ - By election campaign
ಉಪಚುನಾವಣೆ ಸಮೀಪಿಸುತ್ತಿದ್ದು, ಅಥಣಿ ಕ್ಷೇತ್ರದ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಿದ ಎಂ.ಬಿ.ಪಾಟೀಲ್, ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರ ಆರಂಭಿಸಿದ್ದಾರೆ.
ಅಖಾಡಕ್ಕಿಳಿದ ಎಂ.ಬಿ.ಪಾಟೀಲ್
ಅಥಣಿ ಕೈ ಅಭ್ಯರ್ಥಿಗಳ ಬಂಡಾಯ ಶಮನ ಮಾಡಿದ ಮಾಜಿ ಸಚಿವ ಎಂಬಿ ಪಾಟೀಲ್, ಅಥಣಿ ತಾಲೂಕಿನ ನಂದಗಾಂವ್ ಗ್ರಾಮದಿಂದ ಪ್ರಚಾರಕ್ಕೆ ಚಾಲನೆ ನೀಡಿ, ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಮತ ಯಾಚನೆ ನಡೆಸುತ್ತಿದ್ದಾರೆ.
ಮತ ಯಾಚನೆ ವೇಳೆ ಎಂಬಿ ಪಾಟೀಲ್, ಎದುರಾಳಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸುತ್ತಿದ್ದು, ಗಜಾನನ ಮಂಗಸೂಳಿ 50000 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.