ಕರ್ನಾಟಕ

karnataka

ETV Bharat / state

ಗಡಿನಾಡಲ್ಲಿ ಉಪ ಸಮರದ ಕಾವು.. ಬಿ ಫಾರ್ಮ್​ಗಾಗಿ ರಾಷ್ಟ್ರೀಯ ಪಕ್ಷದ ನಾಯಕರ ದುಂಬಾಲು ಬಿದ್ದ ಆಕಾಂಕ್ಷಿಗಳು.. - ಅಥಣಿ ಕ್ಷೇತ್ರ

ರಾಜ್ಯದಲ್ಲಿ ಉಪಚುನಾವಣೆ ಸಮರ ಆರಂಭವಾಗಿದೆ. ಗಡಿನಾಡು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆಯೂ ಏರುತ್ತಿದೆ. ಎರಡು ಪಕ್ಷಗಳು ಯಾರಿಗೆ ಆಯ್ಕೆ ಮಾಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು

By

Published : Sep 22, 2019, 7:21 PM IST

ಅಥಣಿ:ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ನ ಆಕಾಂಕ್ಷಿಗಳು ಬಿ ಫಾರ್ಮ್ ಪಡೆಯಲು ರಾಜಕೀಯ ನಾಯಕರ ಮನೆ ಬಾಗಿಲಿಗೆ ಎಡತಾಕಲು ಆರಂಭಿಸಿದ್ದಾರೆ. ಅಥಣಿ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ.

ಕಾಂಗ್ರೆಸ್​ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು

ಅಥಣಿ ಕ್ಷೇತ್ರದ ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿಗಳು ಯಾರೆಂಬುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿಯಿಂದ ಲಕ್ಷ್ಮಣ್ ಸವದಿ ಕಣಕ್ಕಿಳಿಯದಿದ್ದರೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಪ್ರಬಲ ಆಕಾಂಕ್ಷಿಯಾಗಲಿದ್ದಾರೆ. ಸೆಪ್ಟಂಬರ್​ 23ರಂದು ಅನರ್ಹ ಶಾಸಕರು ಚುನಾವಣೆಗೆ ನಿಲ್ಲದಂತೆ ಕೋರ್ಟ್​ ಆದೇಶ ನೀಡಿದರೆ ಅವರ ತಮ್ಮ ಮುರುಗೇಶ್ ಕುಮಟಳ್ಳಿ ನಿಲ್ಲುವ ಸಾಧ್ಯತೆ ಇದೆ.ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ ಮಾಜಿ ಸಚಿವ ಎಂ ಬಿ ಪಾಟೀಲ್ ಅವರ ತಮ್ಮ ಸುನೀಲ್‌ಗೌಡ ಪಾಟೀಲ್ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಅಥಣಿಯಲ್ಲಿ ವಕೀಲ ವೃತ್ತಿಯಿಂದ ಗುರುತಿಸಿಕೊಂಡಿರುವ ಎಲ್‌ ಡಿ ಹಳಿಂಗಳಿ ಅವರು ಇದೇ ರೇಸ್​ನಲ್ಲಿದ್ದಾರೆ.

ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಮತ್ತು ಎಸ್ ಎಲ್ ಬೂಟಾಳೆ, ಸತ್ಯಪ್ಪ ಭಾಗ್ಯನವರ ಇವರೆಲ್ಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೆ ಮಣೆ ಹಾಕ್ತಾರೆ ಎಂಬುದು ಕಾದು ನೋಡಬೇಕಿದೆ.

ABOUT THE AUTHOR

...view details