ಕರ್ನಾಟಕ

karnataka

ETV Bharat / state

ಖಾಸಗಿ ಬಸ್-‌ಟ್ರಕ್‌ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ 6 ಜನ ಸಾವು - ರಾಷ್ಟ್ರೀಯ ಹೆದ್ದಾರಿ 4

ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಖಾಸಗಿ ಬಸ್ ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಆರು ಜನ ಸಾವನ್ನಪ್ಪಿದ ದುರಂತ ನಡೆದಿದೆ.

By

Published : Sep 12, 2019, 4:54 PM IST

ಚಿಕ್ಕೋಡಿ :ಮಹಾರಾಷ್ಟ್ರ ರಾಜ್ಯದ ಸತಾರ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಖಾಸಗಿ ಬಸ್ ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಆರು ಜನ ಸಾವನ್ನಪ್ಪಿದ ಘಟನೆ ನಡೆದಿದೆ.

ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಬೆಳಗಾವಿ ನಗರ ಅನಗೋಳನ ಅಬ್ಬಾಸ ಅಲಿ ಕಾಟಗಿ (43), ವಡಗಾಂವಿಯ ರವೀಂದ್ರ ಕರೇಂಗಾರ (45), ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಬಸವಂತ ಗಲ್ಲಿಯ ವಿಶ್ವನಾಥ ವಿರೂಪಾಕ್ಷಿ ಗಡ್ಡಿ (58), ಡಾ.‌ ಸಚೀನ್ ಗೋಂಡಾ ಹಾಗೂ ಮಹಾದ ಸಾತಾರಾ ಜಿಲ್ಲೆಯ ಜಾವಳಿ ತಾಲೂಕಿನ ದೇವೇವಾಡಿ ಗ್ರಾಮದ ಅಶೋಕ ರಾಮಚಂದ್ರ ಜುನಘರೆ (50) ಎಂದು ತಿಳಿದು ಬಂದಿದ್ದು ಇನ್ನೂ ಒಬ್ಬರ ಗುರುತು ಪತ್ತೆ ಆಗಿಲ್ಲ.

ಮುಂಬೈನಿಂದ ಬೆಳಗಾವಿಗೆ ಚಲಿತ್ತಿದ್ದ ಖಾಸಗಿ ಬಸ್, ಪುಣೆಯಿಂದ ಕೊಲ್ಹಾಪುರಕ್ಕೆ ಸಾಗುತ್ತಿತ್ತು ಲಾರಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಸತಾರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details