ಬೆಳಗಾವಿ: ಮಲಪ್ರಭಾ ನದಿ ಪ್ರವಾಹದ ಹಿನ್ನೆಲೆ ಎರಡು ವಾರದಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಸದ್ಯ ಪ್ರವಾಹ ಇಳಿಮುಖವಾಗಿದ್ದರಿಂದ ರಸ್ತೆಗಿಳಿದ ಬಸ್ಗಳನ್ನು ನೋಡಿ ಗ್ರಾಮದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಶಾಂತಳಾದ ಮಲಪ್ರಭೆ: ಬೆಳಗಾವಿಯಲ್ಲಿ ರಸ್ತೆಗಿಳಿದ ಬಸ್ಗಳನ್ನ ನೋಡಿ ಗ್ರಾಮಸ್ಥರು ಖುಷ್ - Flood in Karnataka
ಜಿಲ್ಲೆಯಲ್ಲಿ ಮಲಪ್ರಭಾ ನದಿಯಿಂದ ಉಂಟಾಗಿದ್ದ ಪ್ರವಾಹದಿಂದ ಕಳೆದ ಎರಡು ವಾರದಿಂದ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಇಂದು ಪ್ರವಾಹ ತಗ್ಗಿದ್ದು, ರಸ್ತೆಗಿಳಿದ ಬಸ್ಗಳನ್ನು ಕಂಡ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
![ಶಾಂತಳಾದ ಮಲಪ್ರಭೆ: ಬೆಳಗಾವಿಯಲ್ಲಿ ರಸ್ತೆಗಿಳಿದ ಬಸ್ಗಳನ್ನ ನೋಡಿ ಗ್ರಾಮಸ್ಥರು ಖುಷ್](https://etvbharatimages.akamaized.net/etvbharat/prod-images/768-512-4126174-thumbnail-3x2-bus.jpg)
ಬಸ್ ಸಂಚಾರ ಪ್ರಾರಂಭ
ಜಿಲ್ಲೆಯಲ್ಲಿ ಮಲಪ್ರಭಾ ನದಿ ಪ್ರವಾಹದಿಂದಾಗಿ ಪಾರಿಶ್ವಾಡ, ಅವರೊಳ್ಳಿ, ಬಿಳಕಿ, ಕೊಡಚವಾಡ, ಚಿಕ್ಕದಿನಕೊಪ್ಪ ಗ್ರಾಮಗಳ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಸದ್ಯ ಪ್ರವಾಹ ತಗ್ಗಿದ ಹಿನ್ನೆಲೆ ಮತ್ತೆ ಸಂಚಾರ ಪ್ರಾರಂಭವಾಗಿದ್ದು, ಗ್ರಾಮಗಳಿಗೆ ಆಗಮಿಸಿದ ಬಸ್ಗಳನ್ನು ಕಂಡ ಗ್ರಾಮಸ್ಥರು ನಿರಾಳವಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಬಸ್ ಸಂಚಾರ ಪ್ರಾರಂಭ
ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲ ಕೊಚ್ಚಿಹೋಗಿರುವ ಹಿನ್ನೆಲೆ ನಿಧಾನವಾಗಿ ಬಸ್ಗಳು ಸಂಚರಿಸುತ್ತಿದ್ದುದು ಕಂಡು ಬಂತು. ಸದ್ಯ ಬೆಳಗಾವಿಯಿಂದ ಪಾರಿಶ್ವಾಡ ಮಾರ್ಗವಾಗಿ ಬೀಡಿ ಗ್ರಾಮದವರೆಗೆ ಬಸ್ಗಳು ನಿರಾತಂಕವಾಗಿ ಓಡಾಡುತ್ತಿವೆ.