ಅಥಣಿ:ಕಳೆದ ಐದು ದಿನಗಳಿಂದ ರಾಜ್ಯ ಸಾರಿಗೆ ನೌಕರರು ಆರನೇ ವೇತನ ಆಯೋಗ ರಚನೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರೂರು ಅಥಣಿಯಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಅಥಣಿ ಘಟಕದಿಂದ ನಿನ್ನೆಯಿಂದ ಬಸ್ ಸೇವೆ ಒದಗಿಸಲಾಗುತ್ತಿದೆ. ಇವತ್ತು ಮುಂಜಾನೆಯಿಂದಲೇ ಅಂತಾರಾಜ್ಯ ಬಸ್ ಸಂಚಾರ ಶುರುವಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಉತ್ತರ ಕರ್ನಾಟಕ ಭಾಗದ ಜನರು ತೆಲಂಗಾಣ ರಾಜ್ಯದ ಶ್ರೀಶೈಲಂನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಅಥಣಿ ಬಸ್ ನಿಲ್ದಾಣದಿಂದ ಶ್ರೀಶೈಲಂಗೆ 4 ವಿಶೇಷ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.