ಬೆಳಗಾವಿ:ಸಾರಿಗೆ ಸಿಬ್ಬಂದಿ ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಬಂದ್ ಆಗಿದ್ದ ಸಾರಿಗೆ ಬಸ್ಗಳು ಇಂದಿನಿಂದ ಮತ್ತೆ ತಮ್ಮ ಸೇವೆ ಪ್ರಾರಂಭಿಸಿವೆ.
ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಮುಷ್ಕರ್ ಹಿಂಪಡೆದ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಸಂಚಾರ ಅಂತ್ಯವಾಗಿದ್ದು, ಬಹುತೇಕ ಎಲ್ಲ ಬಸ್ಗಳು ಡಿಪೋದಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿವೆ.