ಕರ್ನಾಟಕ

karnataka

ETV Bharat / state

ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ - ಬುಲೆರೋ ಸೇರಿ ಎರಡು ಬೈಕ್​ಗಳಿಗೆ ಬೆಂಕಿ

ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ ಹಾಗೂ 2 ಬೈಕುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ದುಷ್ಕರ್ಮಿಗಳು ತಡರಾತ್ರಿ ವಿಕೃತಿ ಮೆರೆದು ಪರಾರಿಯಾಗಿದ್ದಾರೆ.

Bulero, two bikes  fire by outlaws  at Ramadurga
ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

By

Published : Jan 18, 2020, 11:39 AM IST

ಬೆಳಗಾವಿ:ಮನೆ ಮುಂದೆ ನಿಲ್ಲಿಸಿದ್ದ ಬುಲೆರೋ ವಾಹನ ಹಾಗೂ 2 ಬೈಕುಗಳಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗದಲ್ಲಿ ಬುಲೆರೋ ಸೇರಿ ಎರಡು ಬೈಕ್​ಗಳಿಗೆ ದುಷ್ಕರ್ಮಿಗಳಿಂದ ಬೆಂಕಿ

ದುಷ್ಕರ್ಮಿಗಳು ತಡರಾತ್ರಿ ವಿಕೃತಿ ಮೆರೆದು ಪರಾರಿಯಾಗಿದ್ದಾರೆ. ರಾಮದುರ್ಗ ಪಟ್ಟಣದ ಪರಶು ಬೇಡಗೆ ಎಂಬುವವರಿಗೆ ಸೇರಿದ ಬೊಲೆರೋ, ಅಮಿತ ಪೇಠೆ ಹಾಗೂ ದಾನೇಶ ಯಾದವಾಡ ಎಂಬುವರಿಗೆ ಸೇರಿದ ಬೈಕ್​​ಗಳು ಸುಟ್ಟು ಕರಕಲಾಗಿವೆ. ಏಕಕಾಲಕ್ಕೆ ಎರಡು ಬೈಕ್ ಸೇರಿ ಬುಲೆರೋಗೆ ಬೆಂಕಿ ಇಡಲಾಗಿದ್ದು, ಬುಲೆರೋ ಅರ್ಧ ಭಾಗ ಸುಟ್ಟು, ಬೈಕ್​ಗಳು ಸಂಪೂರ್ಣ ‌ಭಸ್ಮವಾಗಿವೆ.

ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details