ಬೆಳಗಾವಿ:ತಾಲೂಕಿನ ಹಿಂದವಾಡಿ ಗವಳಿಗಲ್ಲಿಯಲ್ಲಿ ಪಿರಾಜಿಗವಳಿ ಎಂಬುವವರ ಕುಟುಂಬದಲ್ಲಿ ಒಂದು ವಾರದ ಹಿಂದೆ 10ಕ್ಕೂ ಹೆಚ್ಚು ಎಮ್ಮೆ, ಆಕಳುಗಳ ಸರಣಿ ಸಾವು ಸಂಭವಿಸಿತ್ತು. ಸಂತ್ರಸ್ತರ ಮನೆಗಳಿಗೆ ಪಶುವೈದ್ಯ ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಶಾಸಕ ಅಭಯ ಪಾಟೀಲ, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಪ್ರತಿಕ್ರಿಯೆ ನೀಡಿದ್ದು, ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಎಮ್ಮೆ, ಆಕಳುಗಳ ಸರಣಿ ಸಾವು ಪ್ರಕರಣ: ಅಗತ್ಯ ನೆರವು ನೀಡಲು ಕ್ರಮ ಎಂದ ಸಚಿವ ಪ್ರಭು ಚವ್ಹಾಣ
ಎಮ್ಮೆ ಮತ್ತು ಆಕಳುಗಳ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಅಗತ್ಯ ನೆರವು ನೀಡಲು ಕ್ರಮ ಎಂದ ಸಚಿವ ಪ್ರಭು ಚವ್ಹಾಣ
ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಪ್ರಭು ಚವ್ಹಾಣ ಮತ್ತು ಶಾಸಕ ಅಭಯ ಪಾಟೀಲ ಭರವಸೆ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ರೈತನ ಕುಟುಂಬದ ನೆರವಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಿದ್ದಾರೆ ಸಾರ್ವಜನಿಕರು.