ಕರ್ನಾಟಕ

karnataka

ETV Bharat / state

ಬಿಎಸ್​ವೈ ಮಾನಸ ಪುತ್ರ ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹಾಕಬೇಕು.. ಜಯಮೃತ್ಯುಂಜಯ ಸ್ವಾಮೀಜಿ - ವಿಧಾನಸೌಧ ಮುಂದೆ ಪ್ರತಿಭಟನೆ

ಮಾತಿಗೆ ತಪ್ಪಿದರೆ ನವೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾಜದಿಂದ 25 ಲಕ್ಷ ಜನಸಂಖ್ಯೆ ಸೇರಿ ವಿಧಾನಸೌಧ ಮುಂದೆ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Basava Jayamrityunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ

By

Published : Sep 27, 2022, 12:15 PM IST

ಅಥಣಿ(ಬೆಳಗಾವಿ): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾನಸ ಪುತ್ರರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಕೂಡಲಸಂಗಮ ಪೀಠದ ಶ್ರೀಗಳು ಹಾಗೂ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಅಥಣಿ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕವಾಗಿ ಆರ್ಥಿಕವಾಗಿ, ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳುತ್ತಿದ್ದೇವೆ. ದಶಕಗಳ ಹೋರಾಟವಾಗಿದ್ದರು ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಂದ ನಂಬಿಕೆಗೆ ಚ್ಯುತಿ ತರುವಂತ ಕಾರ್ಯಗಳು ನಡೆಯುತ್ತಿವೆ. ಕಳೆದ ವಾರ ಸದನದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕೆಂದು ಧ್ವನಿ ಕೂಡಿಸಿದ್ದಾರೆ. ಆದರೆ ಸದನದಲ್ಲಿ ಮಾತನಾಡಿ ಅಷ್ಟಕ್ಕೇ ಸುಮ್ಮನಾಗಬಾರದು. ಬಿ ಎಸ್ ವೈ ಮಾನಸಪುತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಜಯಮೃತ್ಯುಂಜಯ ಸ್ವಾಮೀಜಿ ಬಿಎಸ್​ವೈ ಅವರಿಗೆ ಸಲಹೆ ನೀಡಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯ

ಮುಖ್ಯಮಂತ್ರಿಯವರು ಬರುವ ಸಚಿವ ಸಂಪುಟದಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದೆಂದು ಭರವಸೆ ನೀಡಿದ್ದಾರೆ. ಈ ಮಾತನ್ನು ಅವರು ತಪ್ಪಿದರೆ ನವೆಂಬರ್ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಪಂಚಮಸಾಲಿ ಸಮಾಜದಿಂದ 25 ಲಕ್ಷ ಜನಸಂಖ್ಯೆ ಸೇರಿ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ರವಾನಿಸಿದರು.

ಕೊನೆ ಹಂತದ ಪ್ರತಿಭಟನೆ ಆಗಿದ್ದರಿಂದ ಮಾಡು ಇಲ್ಲವೇ ಮಡಿ, ಮಡಿಯುವ ಮುನ್ನ ಮೀಸಲಾತಿ ಪಡಿ ಎಂಬ ಪ್ರತಿಭಟನೆಗೆ ಮುಂದಾಗುತ್ತೇವೆ. ಸಿಎಂ ಬೊಮ್ಮಾಯಿ ಕಂಕಣ ಬದ್ಧರಾಗಿ ಮೀಸಲಾತಿ ಕೊಡಿಸುವಲ್ಲಿ ಯಶಸ್ವಿಯಾಗಲೆಂದು ಶ್ರೀಗಳು ಆಗ್ರಹಿಸಿದರು.

ಇದನ್ನೂ ಓದಿ:2ಎ ಮೀಸಲಾತಿಗೆ ಅಂತಿಮ ಗಡುವು ನೀಡಿದ ಪಂಚಮಸಾಲಿ ಕೂಡಲಸಂಗಮ ಶ್ರೀ

ABOUT THE AUTHOR

...view details