ಚಿಕ್ಕೋಡಿ (ಬೆಳಗಾವಿ) : ಚಿಕ್ಕೋಡಿ ನಿರ್ಲಕ್ಷಿಸಿ ಗೋಕಾಕ್ ತಾಲೂಕನ್ನು ಜಿಲ್ಲೆ ಮಾಡಲು ಮುಂದಾದ ಜಾರಕಿಹೊಳಿ ಸಹೋದರರು ಹಾಗೂ ಸರ್ಕಾರದ ವಿರುದ್ಧ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕೋಡಿ ಜಿಲ್ಲೆ ಮಾಡುವಂತೆ ಆಗ್ರಹ.. ಜಾರಕಿಹೊಳಿ ಸಹೋದರರ ವಿರುದ್ದ ವಾಗ್ದಾಳಿ - ಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ
30 ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್ ನಾಯಕರು, ಬಿಜೆಪಿ ಸಂಸದರು ಕೂಡ ಸಾಥ್ ನೀಡಿದ್ದರು. ಆದರೆ, ಅವರ್ಯಾರು ಈಗ ಆಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 30 ವರ್ಷಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಸಹ ಸಾಥ್ ನೀಡಿದ್ದರು. ಅಲ್ಲದೇ, ಚಿಕ್ಕೋಡಿ ಜಿಲ್ಲೆ ಮಾಡಲು ವಿಷ ಸೇವಿಸಲು ಸಿದ್ಧ ಎಂದಿದ್ದರು. ಬಿಜೆಪಿ ಸಂಸದರು ಕೂಡ ಚಿಕ್ಕೋಡಿಯನ್ನು ಜಿಲ್ಲೆ ಮಾಡುವುದಾಗಿ ಹೇಳಿದ್ದರು. ಆದರೆ, ಅವರ್ಯಾರು ಆಡಿದ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರವಿದ್ದಾಗ ಚಿಕ್ಕೋಡಿ ಜಿಲ್ಲೆ ಮಾಡುವುದಾಗಿ ಹೇಳಿದ್ದರು. ಆದರೆ, ಅವರ ಅವಧಿಯಲ್ಲೂ ಚಿಕ್ಕೋಡಿ ಜಿಲ್ಲೆಯಾಗಲಿಲ್ಲ. ಸದ್ಯ ಚಿಕ್ಕೋಡಿಯಲ್ಲಿ 4 ಸಚಿವರು, ಸಂಸದರು ಹಾಗೂ ಅನೇಕ ಹಿರಿಯ ನಾಯಕರಿದ್ದಾರೆ. ಆದರೆ, ಚಿಕ್ಕೋಡಿ ಬಗ್ಗೆ ಯಾರು ತುಟಿ ಬಿಚ್ಚುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.