ಚಿಕ್ಕೋಡಿ (ಬೆಳಗಾವಿ): ಬಾವಿಗೆ ಅಳವಡಿಸಿದ್ದ ಮೋಟಾರ್ ಸ್ಟಾರ್ಟ್ ಮಾಡಲು ತೆರಳಿದ್ದ ಸಹೋದರರಿಬ್ಬರು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದಿದೆ.
ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಸಹೋದರರು ವಿದ್ಯುತ್ ಶಾಕ್ಗೆ ಬಲಿ - Belagavi news
ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಸಹೋದರರು ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಜಮೀನಿಗೆ ನೀರು ಹಾಯಿಸಲು ತೆರಳಿದ್ದ ಸಹೋದರರು ವಿದ್ಯುತ್ ಶಾಕ್ಗ್ ಬಲಿ
ರಾಜು ಬಾಳಪ್ಪ ಬಡಿಗೇರ (25) ಹಾಗೂ ಶಂಕರ್ ರಾಮಪ್ಪ ಬಡಿಗೇರ (26) ಮೃತ ಸಹೋದರರು. ಬೆಳಗ್ಗೆ ಹೊಲಕ್ಕೆ ನೀರು ಹಾಯಿಸಲು ಬಾವಿಯ ಮೋಟರ್ ಪ್ರಾರಂಭಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸಹೋದರರು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.