ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಅಣ್ಣ ತಮ್ಮಂದಿರ ಜಗಳ ಕಿರಿಯ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶುಕ್ರವಾರ ರಾತ್ರಿ ಲಕ್ಷ್ಮೀ ನಗರದಲ್ಲಿ ನಡೆದಿದೆ. ಮೂಲತಃ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ನಿವಾಸಿ ಬಸವರಾಜ ತಳವಾರ (41) ಕೊಲೆಯಾದ ವ್ಯಕ್ತಿ. ರಾಜು ತಳವಾರ (46) ಕೊಲೆ ಆರೋಪಿ.
ಬಸವರಾಜ ತಳವಾರ ಸದ್ಯ ಮಚ್ಚೆ ನಗರದ ಲಕ್ಷ್ಮೀ ಗಲ್ಲಿಯಲ್ಲಿ ವಾಸಿಸುತ್ತಿದ್ದರು. ಕೊಲೆಗೆ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ. ಆದರೆ, ಸಹೋದರನ ಕೊಲೆಗೆ ಆಸ್ತಿ ವಿವಾದ ಹಾಗೂ ತಾಯಿಯ ಪಿಂಚಣಿ ಹಣವೇ ಕಾರಣ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.