ಬೆಳಗಾವಿ: ಪ್ರವಾಹ ಪರಿಹಾರ ನೀಡದ ಕೇಂದ್ರದ ವಿರುದ್ಧ ಮಾತನಾಡದೆ ಇಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಮೊದಲು ಗಟ್ಟಿ ಧ್ವನಿ ಮಾಡಿ ಕೇಂದ್ರದ ಬಳಿ ಕೇಳಿ ಪರಿಹಾರ ತನ್ನಿ ಆಮೇಲೆ ಪಾದಯಾತ್ರೆ ಮಾಡಿ ಎಂದು ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.
ಮೊದಲು ಪರಿಹಾರ ತನ್ನಿ ಆಮೇಲೆ ಪಾದಯಾತ್ರೆ ಮಾಡಿ: ಜೊಲ್ಲೆ ವಿರುದ್ಧ ಕಾರ್ಯಕರ್ತರ ಅಸಮಾಧಾನ
ಪ್ರವಾಹ ಬಂದು ಜನ ಒದ್ದಾಡುತ್ತಿದ್ದಾರೆ. ಆದರೆ ಸಂಸದ ಅಣ್ಣ ಸಾಹೇಬ ಜೊಲ್ಲೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬೆಳಗಾವಿಯ ಹುದಲಿ ಗ್ರಾಮದ ಜನ ತಮ್ಮೂರಿಗೆ ಪಾದಯಾತ್ರೆಗೆ ಬಂದ ಜನ ಘೇರಾವ್ ಹಾಕಿದ್ದಾರೆ.
ಇಂದು ಹುದಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿಯರ ಜನ್ಮದಿನಾಚರಣೆ ಅಂಗವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರಿಗೆ ಬಿಜೆಪಿ ಕಾರ್ಯಕರ್ತರು ತರಾಟೆಗೆ ತಗೆದುಕೊಂಡರು. ಸಂತ್ರಸ್ತರಿಗೆ ಪರಿಹಾರ ನೀಡಿದ ಕೇಂದ್ರ ಸರಕಾರದ ವಿರುದ್ಧ ಮಾತನಾಡದ ಸಂಸದರು ಪಾದಯಾತ್ರೆ ಮಾಡುತ್ತಿದ್ದಾರೆ. ಮೊದಲು ಸಂತ್ರಸ್ತರಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹ ಹಾಗೂ ಭೀಕರ ಮಳೆಯಿಂದ ಮನೆ ಮಠ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರದಿಂದ ಹಣ ಪಡೆಯುವುದು ಸಂಸದರ ಕೆಲಸ. ಆದರೇ, ನಮ್ಮ ಸಂಸದರು ಕೇಂದ್ರದ ಹತ್ತಿರ ಮಾತನಾಡುತ್ತಿಲ್ಲ. ಪರಿಹಾರ ತರದಿದ್ದರೆ ಅವರು ಅವರ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.