ಚಿಕ್ಕೋಡಿ :ಚಿಕ್ಕೋಡಿ ಪಟ್ಟಣದ ಆರ್ಡಿ ಕಾಲೇಜಿನ ಮುಖ್ಯ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿರುವ ಅಹಿತಕರ ಘಟನೆ ನಡೆದಿದೆ. ಪಟ್ಟಣದ ಇಂದ್ರಾ ನಗರ ನಿವಾಸಿ ಸುಫೀಯಾನ ರಾಜು ಮುಲ್ಲಾ (10) ಸ್ಥಳದಲ್ಲೇ ಸಾವನ್ನಪ್ಪಿರುವ ಬಾಲಕ ಎಂದು ಗುರುತಿಸಲಾಗಿದೆ.
ಗಾಳಿ ರೂಪದಲ್ಲಿ ಬಂದ ಯಮರಾಜ.. ಕಾಲೇಜಿನ ಗೇಟ್ ಬಿದ್ದು ಬಾಲಕ ಸಾವು! - ಚಿಕ್ಕೋಡಿಯಲ್ಲಿ ಕಾಲೇಜ್ ಗೇಟ್ ಬಿದ್ದು ಬಾಲಕ ಸಾವು,
ಕಾಲೇಜಿನ ಗೇಟ್ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.
ಕಾಲೇಜ್ ಗೇಟ್ ಬಿದ್ದು ಬಾಲಕ ಸಾವು
ಗೇಟ್ ಮುಂದೆ ಸುಫೀಯಾನ ರಾಜು ಮುಲ್ಲಾ ಆಟವಾಡುತ್ತಿರುವಾಗ ರಭಸದ ಗಾಳಿಗೆ ಗೇಟ್ ಆತನ ಮೈಮೇಲೆ ಬಿದ್ದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಈ ಘಟನೆಯ ಮಾಹಿತಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಚಿಕ್ಕೋಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
Last Updated : Jul 31, 2021, 3:15 PM IST