ಕರ್ನಾಟಕ

karnataka

ETV Bharat / state

ಗಡಿ ರಕ್ಷಣಾ ಆಯೋಗ ಪುನಾರಚನೆಗೆ ಆಗ್ರಹ... - belgum latest news

ಎರಡು ವರ್ಷದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರು ಸಭೆ ನಡೆಸಿದರು.

Border Protection Commission demands reconstruction
ಗಡಿ ರಕ್ಷಣಾ ಆಯೋಗದ ಅಧ್ಯಕ್ಷರ ಸಭೆ

By

Published : Feb 4, 2020, 6:11 AM IST

ಬೆಳಗಾವಿ: ಗಡಿ ಸಂರಕ್ಷಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ಕೊಟ್ಟಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಎರಡು ವರ್ಷದ ಬಳಿಕ ಜಿಲ್ಲೆಯಲ್ಲಿ ಗಡಿ ರಕ್ಷಣಾ ಆಯೋಗದ ಅಧ್ಯಕ್ಷರು ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಕನ್ನಡ ಪರ ಸಂಘಟನೆ ಮುಖಂಡರು, ಮಹಾರಾಷ್ಟ್ರ ‌ನಾಯಕರ ಉಪಟಳ ನಿಯಂತ್ರಿಸಬೇಕು. ಅಂಥವರ ವಿರುದ್ಧ ಆಯೋಗ‌ ಕಾನೂನು ಕ್ರಮ ಜರುಗಿಸಬೇಕು. ಪ್ರಚೋದಿಸುವ ಇಂಥವರನ್ನು ನಿರ್ಲಕ್ಷಿಸಿ ಎಂದು ಅಧ್ಯಕ್ಷರು ‌ಸಲಹೆ‌ ನೀಡಿದರು.

ಇದಕ್ಕೆ ಕನ್ನಡ ‌ಪರ‌ ಸಂಘಟನೆ ಮುಖಂಡರು ‌ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತಾ ಆಯೋಗದ ‌ಅಧ್ಯಕ್ಷರು, ಮಹಾರಾಷ್ಟ್ರದ ಗಡಿ ಕ್ಯಾತೆ ಬಗ್ಗೆ ಶೀಘ್ರವೇ ಸುಪ್ರೀಂಕೋರ್ಟ್​ಗೆ ‌ಮಧ್ಯಂತರ ಅರ್ಜಿ ಸಲ್ಲಿಸುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರು ಎರಡು ವರ್ಷಗಳ ಬಳಿಕ ಬೆಳಗಾವಿಗೆ ಆಗಮಿಸಿ ನಡೆಸಿದ ಸಭೆ ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯಲಿಲ್ಲ ಎಂದು ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದರು. 2004ರವರೆಗೆ ಇದ್ದ ಗಡಿ ಕಾನೂನು ಸಲಹಾ ಸಮಿತಿ 2015ಕ್ಕೆ ಗಡಿ ಸಂರಕ್ಷಣಾ ಆಯೋಗ ಎಂದು ಪರಿವರ್ತನೆಯಾಗಿತು. ಅಂದಿನಿಂದ ಗಡಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳು ಗಡಿ ಸಂರಕ್ಷಣಾ ಆಯೋಗದ ವ್ಯಾಪ್ತಿಗೆ ಬರುತ್ತೆ ಎಂದು ಅಂದಿನ ಆಯೋಗದ ಅಧ್ಯಕ್ಷ ನ್ಯಾ.ವಿ.ಎಸ್.ಮಳೀಮಠ ಹೇಳಿದ್ರು.

ಗಡಿ ರಕ್ಷಣಾ ಆಯೋಗದ ಅಧ್ಯಕ್ಷರ ಸಭೆ

ಬೆಳಗಾವಿಗೆ ಮಹಾರಾಷ್ಟ್ರದವರು ಬಂದು ಕಿರಿಕಿರಿ ಮಾಡುವವರು ವಿರುದ್ಧ ಕ್ರಮ ಕೈಗೊಳ್ಳುವುದು ಆಯೋಗದ ವ್ಯಾಪ್ತಿಗೆ ಬರುತ್ತೆ ಎಂದು ತಿಳಿದಿದ್ವಿ. ಅದನ್ನು ಆಯೋಗದ ಅಧ್ಯಕ್ಷರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹೀಗಾಗಿ ಗಡಿ ಸಂರಕ್ಷಣಾ ಆಯೋಗವನ್ನು ಪುನಾರಚನೆ ಮಾಡಬೇಕು. ಗಡಿ ಸಂರಕ್ಷಣಾ ಆಯೋಗದ ಕಚೇರಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು. ಹಾಲಿ ಅಧ್ಯಕ್ಷರನ್ನು ಬದಲಿಸಿ ಮುಂಬೈ ಕರ್ನಾಟಕ ಮೂಲದವರನ್ನು ಆಯೋಗದ ‌ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು‌ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ‌ ಚಂದರಗಿ ಆಗ್ರಹಿಸಿದರು.

ಅದೇನೇ ಇರಲಿ ಎರಡು ವರ್ಷದ ಬಳಿಕ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರು ಬೆಳಗಾವಿಯಲ್ಲಿ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಕೇಳಿದ ಬಹುತೇಕ ಪ್ರಶ್ನೆಗೆ ಅಧ್ಯಕ್ಷರು ನಮ್ಮ ವ್ಯಾಪ್ತಿಗೆ ಬರಲ್ಲ ಎಂದರು. ಅಧ್ಯಕ್ಷರ ಈ ನಡೆ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಯಿತು. ಆಯೋಗ ಪುನಾರಚನೆ ಬಗ್ಗೆ ಆದಷ್ಟು ಬೇಗ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ಕನ್ನಡ ಪರ ಸಂಘಟನೆಗಳ ಆಗ್ರಹವಾಗಿದೆ.

ABOUT THE AUTHOR

...view details