ಚಿಕ್ಕೋಡಿ(ಬೆಳಗಾವಿ):ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತ್ವೇಷಮಯ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆ ಕರ್ನಾಟಕ ಪೊಲೀಸರ ಸೂಚನೆ ಮೇರೆಗೆ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ 250 ಕೆಎಸ್ಆರ್ಟಿಸಿ ಬಸ್ ಸಂಚಾರ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ಚಿಕ್ಕೋಡಿ ಸಾರಿಗೆ ವಿಭಾಗಾಧಿಕಾರಿ ಶಶಿಧರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಗಡಿ ಕ್ಯಾತೆಯಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಎಂಇಎಸ್, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಾರ್ಯಕರ್ತರು, ದಂಗೆ ಏಳುವ ಹಾಗೂ ಪುಂಡಾಟಿಕೆ ನಡೆಸುವ ಸಾಧ್ಯತೆಯೂ ಹೆಚ್ಚಾಗಿದೆ.
ಈ ಹಿನ್ನೆಲೆ ಕರ್ನಾಟಕದಿಂದ ಸಂಚರಿಸುವ ಬಸ್ಗಳನ್ನು ಟಾರ್ಗೆಟ್ ಮಾಡಿ, ಕಲ್ಲು ತೂರಾಟ ಸೇರಿದಂತೆ ಅಹಿತಕರ ಕೃತ್ಯಗಳಿಗೆ ಕೈ ಹಾಕಬಹುದು. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದೂ ಮಹಾರಾಷ್ಟ್ರಕ್ಕೆ ಸಂಚರಿಸಬೇಕಿದ್ದ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು ಕೊಲ್ಲಾಪುರ, ಮೀರಜ್ ಬಾರ್ಡರ್ ಬಳಿ ನಿಲುಗಡೆ ಮಾಡಲಾಗುವುದು. ಕೊಲ್ಲಾಪುರ ಬಾರ್ಡ್ರ್ ಬಳಿ 150 ಬಸ್ಗಳು ಹಾಗೂ ಮೀರಜ್ ಬಾರ್ಡ್ರ್ ಬಳಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದುಪ್ಪಟ್ಟು ಹಣ ವಸೂಲಿ: ಸದ್ಯ ಗಡಿಯಲ್ಲಿ ಉದ್ವಿಗ್ನ ವಾತಾವರಣದಿಂದ ಬಸ್ ಸಂಚಾರ ಸೇವೆ ಸ್ಥಗಿತಗೊಳಿಸಲಾಗಿದೆ. ಇದನ್ನೇ ಖಾಸಗಿ ವಾಹನ ಚಾಲಕರು ದುರುಪಯೋಗ ಮಾಡಿಕೊಂಡು ಕರ್ನಾಟಕ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಕಾಗವಾಡದಿಂದ ಮಹಾರಾಷ್ಟ್ರ ಮೀರಜ- ಸಾಂಗ್ಲಿ ನಗರ ಕೇವಲ 20 ಕಿಲೋಮೀಟರ್ ಇದ್ದರೂ, 'ಮಹಾ' ಚಾಲಕರು ಒಬ್ಬ ಪ್ರಯಾಣಿಕರಿಗೆ 150 ರಿಂದ 200 ರೂಪಾಯಿ ನಿಗದಿ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ. ಗಡಿ ಕ್ಯಾತೆ ಉದ್ವಿಗ್ನತೆ ಗಡಿ ಜನರಲ್ಲಿ ಬಿಸಿ ಮುಟ್ಟಿಸಿದೆ.
ಬಸ್ ಸಂಚಾರ ಸ್ಥಗಿತ ಗಡಿ ಜನರಿಗೆ ತಟ್ಟಿದ ಬಿಸಿ ಗಡಿ ಜನರಿಗೆ ತೀವ್ರ ಸಂಕಷ್ಟ:ವಿಜಯಪುರ ಚಿಕ್ಕೋಡಿ ಅಥಣಿ, ಬಾಗಲಕೋಟ, ಬೆಳಗಾವಿ ಜನರು ಆರೋಗ್ಯ ಚಿಕಿತ್ಸೆಗೋಸ್ಕರ ಮೀರಜ್ ಸಾಂಗ್ಲಿಗೆ ಆಸ್ಪತ್ರೆಗಳನ್ನು ಅವಲಂಬಿಸಿದ್ದು, ನೇರ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಉಭಯ ರಾಜ್ಯಗಳ ಸರ್ಕಾರ ಮುಖ್ಯಮಂತ್ರಿಗಳು ಮಾತನಾಡಿ ಸಮಸ್ಯೆ ಶೀಘ್ರ ಬಗೆಹರಿಸಿ ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಅನುವು ಮಾಡಿಕೊಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಇದನ್ನೂಓದಿ:ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ: 'ಮಹಾ' ಲಾರಿಗಳಿಗೆ ಕಲ್ಲು, ಹಲವರು ಪೊಲೀಸ್ ವಶಕ್