ಕರ್ನಾಟಕ

karnataka

ETV Bharat / state

ನಿಪ್ಪಾಣಿಯಲ್ಲಿ ಉಭಯ ರಾಜ್ಯಗಳ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ - ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯದ ಗಡಿ ಹೊಂದಿರುವ ನಿಪ್ಪಾಣಿ ನಗರದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತಿದೆ.

Border dispute: police officers meeting in Nippani
ಉಭಯ ರಾಜ್ಯಗಳ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ

By

Published : Nov 29, 2022, 11:29 AM IST

ಅಥಣಿ(ಬೆಳಗಾವಿ): ಗಡಿ ವಿಚಾರವಾಗಿ ಮಹಾರಾಷ್ಟ್ರ ರಾಜ್ಯದ ಕೆಲವು ಸಂಘಟನೆಗಳು ಗಡಿಯಲ್ಲಿ ವಿವಾದ ಹಬ್ಬಿಸಿವೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನಿಪ್ಪಾಣಿಯಲ್ಲಿ ಎರಡು ರಾಜ್ಯಗಳ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಯುತ್ತಿದೆ.

ರಾಜ್ಯದ ಗಡಿ ಹೊಂದಿರುವ ನಿಪ್ಪಾಣಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ಶುರುವಾಗಿದೆ. ಆನ್​ಲೈನ್ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರ ಐಜಿಪಿ, ಎಸ್​​ಪಿ ಸಾಂಗಲಿ, ಬೆಳಗಾವಿ ಐಜಿ, ಕಮಿಷನರ್, ಎಸ್​ಪಿ ಹಾಗೂ ಗಡಿಭಾಗದ ಎಲ್ಲಾ ಡಿವೈಎಸ್​ಪಿ ಸಭೆಯಲ್ಲಿದ್ದಾರೆ.

ಗಡಿ ವಿವಾದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯುತ್ತಿದೆ.

ಇದನ್ನೂ ಓದಿ:ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದದ ಸಾಧಕ-ಬಾಧಕಗಳ ಚರ್ಚೆ ನಡೆಸುತ್ತೇನೆ: ಬೊಮ್ಮಾಯಿ

ABOUT THE AUTHOR

...view details