ಚಿಕ್ಕೋಡಿ: ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ.
ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ: ಶಾಸಕ ಪಿ.ರಾಜೀವ್ - ಬಿಜೆಪಿ ಶಾಸಕ ಪಿ.ರಾಜೀವ್
ಸಿಎಎ ಕಾಯ್ದೆ ಕುರಿತು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಲು ಬಿಜೆಪಿ ಮುಂದಾಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ.
ಶಾಸಕ ಪಿ.ರಾಜೀವ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿರುವ ಯಾವುದೇ ಮುಸ್ಲಿಂರು ಪಾಕಿಸ್ತಾನವನ್ನು ಬೆಂಬಲಿಸುವುದಿಲ್ಲ. ಆದರೆ ಪಾಕಿಸ್ತಾನದ ಪರವಾಗಿ ನಿಂತಿರುವುದು ಕಾಂಗ್ರೆಸ್. ಸಿಸಿಎ ಬಗ್ಗೆ ಬೆಳಗಾವಿ ಜಿಲ್ಲೆಯ 3985 ಬೂತ್ಗಳಲ್ಲಿ ಆಂದೋಲನ ನಡೆಸಲಾಗುತ್ತದೆ. ಈ ಆಂದೋಲನದ ಪ್ರಕಾರ ಪ್ರತೀ ಬೂತ್ ಅಧ್ಯಕ್ಷರ ಮನೆಯ ಮೇಲೆ ಗಣರಾಜ್ಯೋತ್ಸವ ದಿನದಂದು ಭಾರತದ ರಾಷ್ಟ್ರಧ್ವಜ ಹಾರಿಸುತ್ತೇವೆ. ಪ್ರತೀ ಅಧ್ಯಕ್ಷರ ಮನೆಯಲ್ಲಿ ಭಾರತ ಮಾತೆಯ ಫೋಟೋ ಪೂಜೆ ಮಾಡಲಾಗುತ್ತದೆ ಎಂದರು. ಇದೇ ವೇಳೆ ಎನ್ಆರ್ಸಿ ಮತ್ತು ಸಿಎಎ ಕಾಯ್ದೆ ಕುರಿತು ಗೊಂದಲ ಹುಟ್ಟಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ದೂರಿದರು.