ಬೆಳಗಾವಿ:ಮಹಾ ಮಳೆಗೆ ಜಿಲ್ಲೆಯ ಸಾವಿರಾರು ಜನರ ಬದುಕು ಕೊಚ್ಚಿಕೊಂಡು ಹೋಗಿದೆ. ಜನ ಜಾನುವಾರುಗಳ ಪರಿಸ್ಥಿತಿ ಹೇಳತೀರದಂತಾಗಿದೆ. ಜೊತೆಗೆ ನೂರಾರು ವಿದ್ಯಾರ್ಥಿಗಳ ಅಪಾರ ಪರಿಶ್ರಮವೂ ನೀರು ಪಾಲಾಗಿದೆ.
ಪ್ರವಾಹ ಕಡಿಮೆಯಾದಂತೆ ನಿತ್ಯವೂ ಒಂದೊಂದು ಸಂಕಟದ ಕಥೆಗಳು ಹೊರಬರುತ್ತಿವೆ. ಅಥಣಿ ತಾಲೂಕಿನ ದರೂರ ಗ್ರಾಮದ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಲ್ಲಿಕ್ ಎಂಬಾತನ ಪುಸ್ತಕಗಳು ನೀರಲ್ಲಿ ನೆಂದು ಹೋಗಿವೆ. ಇದರಿಂದ ವರ್ಷವಿಡೀ ಕಷ್ಟಪಟ್ಟು ಓದಿ, ಬರೆದ ನೋಟ್ಬುಕ್ಗಳೇ ನೀರುಪಾಲಾಗಿವೆ. ಮಾರ್ಕ್ಸ್ ಕಾರ್ಡ್ಗಳು ಸಹ ನೀರಿನಲ್ಲಿ ನೆಂದಿವೆ ಎಂದು ವಿದ್ಯಾರ್ಥಿ ಅಳಲನ್ನು ತೋಡಿಕೊಂಡಿದ್ದಾನೆ.