ಚಿಕ್ಕೋಡಿ:ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಕಾಲೋನಿಯಲ್ಲಿ ನಡೆದಿದೆ. ಕಿರಣಾ ವಿಭೂತಿ(10) ಮೃತ ಬಾಲಕಿ.
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆ ಅಂಗಡಿಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗಿದ್ದಳು. ಕೂಡಲೇ ಕುಟುಂಬಸ್ಥರು, ಎಸ್ಡಿಆರ್ಎಫ್ ತಂಡಕ್ಕೆ ಮಾಹಿತಿ ನೀಡಿದ್ದು, ಸಿಬ್ಬಂದಿ ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಹಾವೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ.. ಜನಜೀವನ ಅಸ್ತವ್ಯಸ್ತ
ಎನ್ಡಿಆರ್ಎಫ್ನಿಂದ ಮಹಿಳೆ ರಕ್ಷಣೆ!
ದಿನದಿಂದ ದಿನಕ್ಕೆ ವೇದಗಂಗಾ, ದೂಧ್ ಗಂಗಾ, ಹಿರಣ್ಯಕೇಶಿ ಹಾಗೂ ಕೃಷ್ಣೆ ತನ್ನ ಒಡಲನ್ನು ಬಿಟ್ಟು ಹರಿಯುತ್ತಿರುವ ಪರಿಣಾಮ ನದಿ ತೀರದ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದ್ದು, ನಡು ಗಡ್ಡೆಯಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಕಾರ್ಯಕ್ಕೆ ಎನ್‌ಡಿಆರ್‌ಎಫ್ ತಂಡ ಮುಂದಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಸಿಲುಕಿ ಕೊಂಡಿದ್ದ ಬಾಣಂತಿ ಪ್ರಣಾಲಿ ರಿಷಿಕೇಶ್ ಮಾಳಿ (25) ಮತ್ತು ಅವರ ಮನೆಯಲ್ಲಿದ್ದ 3 ಜನರನ್ನು ರಾಷ್ಟ್ರೀಯ ವಿಪತ್ತು ದಳದಿಂದ ರಕ್ಷಿಸಲಾಗಿದೆ.
ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ಜಲಾವೃತ್ತ
ಮಹಾರಾಷ್ಟ್ರದಲ್ಲಿ ರಣಭೀಕರ ಮಳೆಗೆ ಚಿಕ್ಕೋಡಿ ತಾಲೂಕಿನ ನದಿಗಳಿಗೆ ಭಾರಿ ಪ್ರಮಾಣದಲ್ಲಿ ಪ್ರವಾಹ ಎದುರಾಗಿದೆ. ಸದ್ಯ ಕೃಷ್ಣಾ, ವೇದಗಂಗಾ, ದೂಧ್ಗಂಗಾ ನದಿಗಳಲ್ಲಿ ಕ್ಷಣ - ಕ್ಷಣಕ್ಕೂ ನೀರಿನ ಏರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಕೃಷ್ಣಾನದಿಯ ತೀರದಲ್ಲಿ ಇರುವ ಉತ್ತರ ಕರ್ನಾಟಕದ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾದ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾತ್ರೋರಾತ್ರಿ ನೀರು ನುಗ್ಗಿ ದೇವಸ್ಥಾನವು ಸಂಪೂರ್ಣವಾಗಿ ಜಲಾವೃತ್ತವಾಗಿದೆ. 2019 ರಲ್ಲಿ ಜಲಾವೃತ್ತವಾಗಿದ್ದ ದೇವಸ್ಥಾನ ಸದ್ಯ ಈ ವರ್ಷವು ಜಲಾವೃತ್ತವಾಗಿದೆ.