ಚಿಕ್ಕೋಡಿ : 72 ವಯಸ್ಸಿನ ವೃದ್ಧರೊಬ್ಬರು ಸಾವಿನ ನಂತರ ತಮ್ಮ ದೇಹ ದಾನ ಮಾಡಲು ನಿರ್ಧರಿಸಿ, ಮಾದರಿಯಾಗಿದ್ದಾರೆ.
ದೇಹ ದಾನ ಮಾಡಲು ನಿರ್ಧಾರ: ವೃದ್ಧನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ - ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳೆ ಯಡೂರಿನವರಾದ ಸದಾಶಿವ ಅಂಬಿ
ದೇಹ ದಾನ ಮಾಡಲು ನಿರ್ಧರಿಸಿದ 72ರ ವೃದ್ಧ. ಸದಾಶಿವ ಅಂಬಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
![ದೇಹ ದಾನ ಮಾಡಲು ನಿರ್ಧಾರ: ವೃದ್ಧನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ body-donation-by-yadaru-sadashiva-in-chikkodi](https://etvbharatimages.akamaized.net/etvbharat/prod-images/768-512-6063220-thumbnail-3x2-sanju.jpg)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳೆ ಯಡೂರಿನ ಸದಾಶಿವ ಅಂಬಿ ಅವರು ದೇಹ ದಾನ ಮಾಡಲು ನಿರ್ಧರಿಸಿದವರು. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇವರು ಸ್ವಯಂ ಪ್ರೇರಿತರಾಗಿ ದೇಹ ದಾನಕ್ಕೆ ಮುಂದಾಗಿದ್ದಾರೆ. ಇವರ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಮೃತ್ಯು ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ಬದಲು ದೇಹವನ್ನು ಬೆಳಗಾವಿ ಕೆಎಲ್ಇ ಸಂಸ್ಥೆಯ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜ್ಗೆ ದಾನ ಮಾಡುತ್ತಿದ್ದೇನೆ. ಒಪ್ಪಿಕೊಂಡಿದ್ದಾರೆ. ಮಣ್ಣಾಗಿ ವ್ಯರ್ಥವಾಗುವ ಬದಲು ಇನ್ನೊಬ್ಬರಿಗೆ ಉಪಯೋಗವಾಗಲೆಂದು ದೇಹ ಮಾಡುವುದಾಗಿ ಸದಾಶಿವ ತಿಳಿಸಿದ್ದಾರೆ.