ಕರ್ನಾಟಕ

karnataka

ETV Bharat / state

ಅಥಣಿ ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ..ಗೆಲುವಿಗಾಗಿ ಅಡ್ಡದಾರಿ ಹಿಡಿದ್ರಾ ಅಭ್ಯರ್ಥಿಗಳು..! - ವಾಮಾಚಾರ

ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದೆ. ಕೆಲವು ಅಭ್ಯರ್ಥಿಗಳು ಗೆಲ್ಲಲು ವಾಮಾಚಾರದ ಅಡ್ಡದಾರಿ ಹಿಡಿದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

black-magic-done-near-athani-vote-counting-center
ಅಥಣಿ ಮತ ಏಣಿಕೆ ಕೇಂದ್ರದ ಬಳಿ ವಾಮಾಚಾರ

By

Published : Dec 30, 2020, 9:33 PM IST

ಅಥಣಿ (ಬೆಳಗಾವಿ):ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ ನಡೆದಿರುವುದು ಪತ್ತೆಯಾಗಿದೆ. ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆ ಕಾಲೇಜುಗಳಲ್ಲಿ ಮತ ಏನಿಕೆ ಕಾರ್ಯ ನಡೆಯುತ್ತಿದ್ದರೆ, ಇತ್ತ ಹೊರ ಭಾಗದಲ್ಲಿ ವಾಮಾಚಾರ ನಡೆದಿರುವುದು ಬಯಲಿದೆ ಬಂದಿದೆ.

ಅಭ್ಯರ್ಥಿಗಳು ಗೆಲುವು ಸಾಧಿಸಲು ಮಾಟ ಮಂತ್ರದ ಮೊರೆ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕೆಲವು ಅಭ್ಯರ್ಥಿಗಳು ಗೆಲ್ಲಲು ವಾಮಮಾರ್ಗ ಹಿಡಿದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಥಣಿ ಮತ ಎಣಿಕೆ ಕೇಂದ್ರದ ಬಳಿ ವಾಮಾಚಾರ.
ಗ್ರಾಮ ಪಂಚಾಯಿತಿ ಚುನಾವಣೆಯ ಹಿಂದಿನ ದಿನ ಮತದಾನ ಕೇಂದ್ರದ ಮುಂದೆ ಹಾಗೂ ರಸ್ತೆಯ ಮೇಲೆ ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದವು.

ಇದನ್ನೂ ಓದಿ: ಮೂರು ದಿನಗಳ ಹಿಂದಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು

ABOUT THE AUTHOR

...view details