ಕರ್ನಾಟಕ

karnataka

ETV Bharat / state

ಕಾವೇರಿದ ಗೋಕಾಕ್​ ಉಪಚುನಾವಣೆ: ಬಿಜೆಪಿ ಟಿಕೆಟ್​ಗೆ ಪೈಪೋಟಿ, ಬಂಡಾಯದ ಕಿಚ್ಚು

ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದಲ್ಲಿ ಉಪಚುನಾವಣೆಯ ಬಿಸಿ ಏರುತ್ತಿದ್ದು, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯ ಅಶೋಕ ಪೂಜಾರಿ ನಡುವೆ ಟಿಕೆಟ್​ಗಾಗಿ ಈಗಾಗಲೇ ಮುಸುಕಿನ ಮುನಿಸು ಪ್ರಾರಂಭವಾಗಿದೆ.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ

By

Published : Sep 26, 2019, 12:34 PM IST

ಬೆಳಗಾವಿ:ಸಹೋದರರ ಸ್ಪರ್ಧೆಯ ಕಾರಣ ಕುತೂಹಲ ‌ಮೂಡಿಸಿರುವ ಗೋಕಾಕ ಕ್ಷೇತ್ರದ ಉಪಚುನಾವಣೆ ಇದೀಗ ಮತ್ತೊಂದು ತಿರುವು ಪಡೆದಿದೆ.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ

ಸುಪ್ರೀಂಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ‌ ಅಭ್ಯರ್ಥಿಯಾಗಿ, ಲಖನ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಮುನ್ಸೂಚನೆ ಸಿಕ್ಕಿದೆ.

ಬಿಜೆಪಿ ಟಿಕೆಟ್​ ಆಕಾಂಕ್ಷಿ ಅಶೋಕ ಪೂಜಾರಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು ಅಶೋಕ ಪೂಜಾರಿ ಉಪಚುನಾವಣೆಯ ಟಿಕೆಟ್​ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ಈ ಸಂಬಂಧ ಸೆಪ್ಟಂಬರ್​ 29ರಂದು ಪೂಜಾರಿ ಅವರು ಬೆಂಬಲಿಗರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ.

ಜೆಡಿಎಸ್​ನಲ್ಲಿದ್ದ ಅಶೋಕ ಪೂಜಾರಿ ಕಳೆದ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ರಮೇಶ ಜಾರಕಿಹೊಳಿ ವಿರುದ್ಧ ಅಖಾಡಕ್ಕಿಳಿದ ಪೂಜಾರಿ ಸೋಲು ಅನುಭವಿಸಿದ್ದರು. ಈಗ ರಮೇಶ್ ಬಿಜೆಪಿಯಿಂದ ಸ್ಪರ್ಧಿಸಿದರೆ ಅಶೋಕ ಪೂಜಾರಿಗೆ ಟಿಕೆಟ್ ಕೈ ತಪ್ಪಲಿದೆ. ಹೀಗಾಗಿ ಅಶೋಕ ಪೂಜಾರಿ ‌ಪಕ್ಷೇತರರಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಇದ್ರಿಂದ ಸಹಜವಾಗಿಯೇ ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ. ಜಾರಕಿಹೊಳಿ ಕುಟುಂಬದ ಸರ್ವಾಧಿಕಾರಿ ಧೋರಣೆ ವಿರುದ್ಧದ ನಮ್ಮ ಹೋರಾಟವಿದ್ದು, ಸಭೆಯಲ್ಲಿ ಬೆಂಬಲಿಗರು ಬಿಜೆಪಿ ‌ಬೆಂಬಲಿಸುವಂತೆ ತಿಳಿಸಿದರೆ ಅದಕ್ಕೂ ಸಿದ್ಧ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ಸೂಚಿಸಿದರೆ ಅದಕ್ಕೂ ಬದ್ದ ಎಂದು ಅಶೋಕ್ ಪೂಜಾರಿ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಗೋಕಾಕನಲ್ಲಿ ತನ್ನದೇ ಮತ ಬ್ಯಾಂಕ್‌ ಹೊಂದಿರುವ ಪೂಜಾರಿ, ಬಿಜೆಪಿಗೆ ಗುಡ್ ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ.

ABOUT THE AUTHOR

...view details