ಕರ್ನಾಟಕ

karnataka

ETV Bharat / state

15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ: ರಮೇಶ್​ ಜಾರಕಿಹೊಳಿ ವಿಶ್ವಾಸ

ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ 136 ಮತಗಟ್ಟೆಯಲ್ಲಿ ಮತದಾನ ಮಾಡಿದ್ದು, ಈ ಬಾರಿ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ್​ ಜಾರಕಿಹೊಳಿ
Ramesh Jarkiholi

By

Published : Dec 5, 2019, 10:56 AM IST

ಗೋಕಾಕ್​:ಇಂದು ಉಪ ಚುನಾವಣೆಯ ಮತದಾನ ಆರಂಭವಾಗಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ 136 ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು15 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು, ಒಂದು ಸ್ಥಾನ ಗೆಲುವುದೂ ಕಷ್ಟ. ಒಂದು ವೇಳೆ ಸೋತ್ರೆ ಎಂಎಲ್​ಸಿ ,ಮಂತ್ರಿ ಮಾಡುತ್ತೇನೆ. ನಾನು ಎದುರಾಳಿ ಬಗ್ಗೆ ಹಗುರವಾಗಿ ಮಾತನಾಡಲ್ಲ. ಸಿದ್ದರಾಮಯ್ಯ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಅವರು ಬಸ್​ಸ್ಟ್ಯಾಂಡ್​ನಲ್ಲಿ ಹೂ ಮಾರುತ್ತಿದ್ದ ಮತ್ತು ಎಸ್​ಟಿಡಿ ಬೂತ್ ಚಿಲ್ಲರೆ ಏಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಲ್ಯದಿಂದಲು ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದ್ದಿದ್ದೇನೆ. ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ. ಗೋಕಾಕ್​ನಲ್ಲಿ ಬರೀ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ. ಅವನ ನೆರಳು ಸಹ ನನ್ನ ಜೊತೆಗೆ ಬೇಡ. ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ. ಅಂಬಿರಾವ್ ಪಾಟೀಲ್​ರನ್ನು ಸತೀಶ್​, ಲಖನ್ ವಿರುದ್ಧ ಸ್ಪರ್ಧೆ ಮಾಡಿಸುತ್ತೇನೆ ಎಂದರು.

ಬೆಳಗಾವಿ ಉಸಾಬರಿ ಬಿಟ್ಟರೇ ಡಿ ಕೆ ಶಿವಕುಮಾರ್ ನನ್ನ ಒಳ್ಳೆಯ ಸ್ನೇಹಿತ ಎಂದ ಅವರು ದಿನೇಶ್​ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಆಗಲು ನಾಲಾಯಕ್ ಎಂದರು.

ABOUT THE AUTHOR

...view details