ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸಿ, ಕೊರೊನಾ ದೂರವಿರಿಸಿ : ಕಟೀಲ್ ಕರೆ - ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

ಕೋವಿಡ್ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಅವುಗಳನ್ನು ಸರಿಯಾಗಿ ಪಾಲಿಸುವ ಮೂಲಕ ನಾವೆಲ್ಲರೂ ನಾಡಿನ ಹೆಮ್ಮೆಯ ನಾಗರಿಕರಾಗುವ ಅಗತ್ಯವಿದೆ. ಇದು ಕೋವಿಡ್ ಮುಕ್ತ ಕರ್ನಾಟಕದ ಆಶಯಕ್ಕೆ ಪೂರಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ..

Katil
Katil

By

Published : Apr 18, 2021, 4:22 PM IST

ಬೆಂಗಳೂರು: ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದೆ. ವೈದ್ಯಕೀಯ ತಜ್ಞರ ಸಲಹೆಯಂತೆ ನಾಡಿನ ಎಲ್ಲಾ ಜನ ಮಾಸ್ಕ್‌ನ ಸಮರ್ಪಕವಾಗಿ ಧರಿಸಿ ಕರ್ನಾಟಕವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಸಹಕರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ನಾಡಿನ ಜನತೆಯಲ್ಲಿ ಮನವಿ ಮಾಡಿರುತ್ತಾರೆ.

ಪ್ರಧಾನಿಗ ನರೇಂದ್ರ ಮೋದಿ ಅವರ ಸಲಹೆಯಂತೆ 'ಸೇವಾ ಹಿ ಸಂಘಟನ್' ಚಿಂತನೆಯನ್ನು ಮುಖಂಡರು ಮತ್ತು ಕಾರ್ಯಕರ್ತರು ಅನುಷ್ಠಾನಕ್ಕೆ ತರಬೇಕು. ಅರ್ಹ ನಾಗರಿಕರು, ಅದರಲ್ಲೂ ಪ್ರಮುಖವಾಗಿ ಹಿರಿಯ ನಾಗರಿಕರು ಕೋವಿಡ್ ಲಸಿಕೆ ಪಡೆಯಲು ನೆರವು ನೀಡಬೇಕು. ಮನೆಗಳಲ್ಲಿ ಹಿರಿಯರು ವಾಸಿಸುತ್ತಿದ್ದರೆ ಅವರಿಗೆ ಅಗತ್ಯ ನೆರವು ನೀಡಬೇಕು ಎಂದು ತಿಳಿಸಿದ್ದಾರೆ.

ಕೋವಿಡ್ ಇನ್ನಷ್ಟು ಹರಡದಂತೆ ತಡೆಯುವ ಕಾರ್ಯದಲ್ಲಿ ಕಳೆದ ವರ್ಷ ಬಿಜೆಪಿಯ ಎಲ್ಲರೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಅಂಥ ಜನಜಾಗೃತಿಯ ಪ್ರಯತ್ನ ಮತ್ತು ಸೇವಾಪರ ಚಟುವಟಿಕೆಗಳನ್ನು ನಾವು ಕೈಗೊಳ್ಳುವ ಅನಿವಾರ್ಯತೆ ಇದೆ. ಇದನ್ನು ಮನಗಂಡು ಈ ನಿಟ್ಟಿನಲ್ಲಿ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ್ದಾರೆ.

ಕೋವಿಡ್ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಅವುಗಳನ್ನು ಸರಿಯಾಗಿ ಪಾಲಿಸುವ ಮೂಲಕ ನಾವೆಲ್ಲರೂ ನಾಡಿನ ಹೆಮ್ಮೆಯ ನಾಗರಿಕರಾಗುವ ಅಗತ್ಯವಿದೆ. ಇದು ಕೋವಿಡ್ ಮುಕ್ತ ಕರ್ನಾಟಕದ ಆಶಯಕ್ಕೆ ಪೂರಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ABOUT THE AUTHOR

...view details