ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ಪೂರ್ವದಲ್ಲಿ ಮೋದಿ-ಶಾ ಜೋಡಿ ಇದ್ದಿದ್ದರೆ, ಪಾಕಿಸ್ತಾನ ಇರ್ತಿರ್ಲಿಲ್ಲ: ಸಿ.ಟಿ. ರವಿ

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ, ನಮ್ಮೂರಿನ ಅನ್ಯಾಯದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು. ಮೋದಿ-ಶಾ ಜೋಡಿ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಿದ್ದರೆ ಪಾಕಿಸ್ತಾನ ಇರುತಿತ್ತಾ,‌ ಪಾಕಿಸ್ತಾನ ಮಾಡಲು ಹೊರಟವರು ತುಂಡಾಗಿ ಹೋಗುತ್ತಿದ್ದರು ಎಂದು ಸಿ.ಟಿ. ರವಿ ಹೇಳಿದರು.

bjp-national-general-secretary-ct-ravi-talk-
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

By

Published : Jan 17, 2021, 8:20 PM IST

ಬೆಳಗಾವಿ:ಕಾಂಟ್ರ್ಯಾಕ್ಟ್ ಫಾರ್ಮಿಂಗ್ ರೈತರ ಆದಾಯ ದ್ವಿಗುಣ ಮಾಡುವ ವ್ಯವಸ್ಥೆ, ಅದು ಹೇಗೆ ರೈತ ವಿರೋಧಿ ಆಗುತ್ತದೆ. ರೈತ ಪರ ಯೋಜನೆಗಳನ್ನು ಪ್ರಧಾನಮಂತ್ರಿ ಮೋದಿ ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ

ಓದಿ: ಮೋದಿ-ಯಡಿಯೂರಪ್ಪ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕದ ವಿಕಾಸ : ಅಮಿತ್‌ ಶಾ

ನಗರದ ಜೆ.ಎನ್.ಎಮ್.ಸಿ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ, ನಮ್ಮೂರಿನ ಅನ್ಯಾಯದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು. ಮೋದಿ-ಶಾ ಜೋಡಿ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಿದ್ದರೆ ಪಾಕಿಸ್ತಾನ ಇರುತಿತ್ತಾ,‌ ಪಾಕಿಸ್ತಾನ ಮಾಡಲು ಹೊರಟವರು ತುಂಡಾಗಿ ಹೋಗುತ್ತಿದ್ದರು ಎಂದರು.

ರೈತರಿಗೆ ಯೋಜನೆ ರೂಪಿಸಿದ ಪಿಎಂ ಮೋದಿ ರೈತ ವಿರೋಧಿ ಆಗ್ತಾರಾ ಎಂದು ಜನಸೇವಕ ಸಮಾವೇಶದಲ್ಲಿ ಕೃಷಿ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಯನ್ನು ಸಮರ್ಥಿಸಿಕೊಂಡರು. ರೈತರು, ಕಾರ್ಯಕರ್ತರು ಪ್ರಧಾನಮಂತ್ರಿ ಪರ ಕೈ ಎತ್ತಿ ಹೇಳಬೇಕು. ನಮ್ಮ ಪ್ರಧಾನಮಂತ್ರಿ ಪ್ರಧಾನ ಸೇವಕರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಯಾರೂ ದಲ್ಲಾಳಿಗಳು ಅಲ್ಲ, ಬಿಜೆಪಿ ಪಕ್ಷ ಜನಸೇವೆ ಮಾಡಲಿದೆ ಎಂದರು.

ABOUT THE AUTHOR

...view details