ಬೆಳಗಾವಿ:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬಾರದೆಂಬ ಉದ್ದೇಶವನ್ನು ಬಿಎಸ್‌ವೈ ಹೊಂದಿದ್ದರು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗೆ ನಡೆದ ಹೋರಾಟ ಹಾಗೂ ನಮ್ಮ ಪ್ರಶ್ನೆಗೆ ವಿಧಾನಸಭೆಯಲ್ಲಿ ಬಿಎಸ್‌ವೈ ಉತ್ತರ ಕೊಡಬಾರದು ಎಂದುಕೊಂಡಿದ್ದರು. ಆಗ ಸಿಎಂ ಬಸವರಾಜ್ ಬೊಮ್ಮಾಯಿ ಒಂದೂವರೆ ಗಂಟೆ ಉತ್ತರ ಕೊಟ್ಟರು. ಆದರೆ ಅವರು ಎಲ್ಲಿಯೂ ಆಶ್ವಾಸನೆ ಕೊಡಲಿಲ್ಲ. ಆಶ್ವಾಸನೆ ಕೊಡಬೇಡ ಅಂತ ಬಿಎಸ್‌ವೈ ಹೇಳಿದ್ದ ಸಂಗತಿಯನ್ನು ಬೊಮ್ಮಾಯಿ ನನಗೆ ಹೇಳಿದ್ದರು. ಬೊಮ್ಮಾಯಿ ಅವರು ಎಂದಿಗೂ ಯಡಿಯೂರಪ್ಪನವರ ಶ್ಯಾಡೋ ಆಗೋದಿಲ್ಲ. ಅವರು ಸ್ವತಂತ್ರ ನಿರ್ಣಯ ಕೈಗೊಳ್ಳುವ ರಾಜಕಾರಣಿ. ಯಾವುದನ್ನು ಕೇಳಬೇಕೋ ಕೇಳುತ್ತಾರೆ. ಪೂರ್ತಿ ರಬ್ಬರ್ ಸ್ಟ್ಯಾಂಪ್ ಆಗ್ತಾರೆಂಬ ಕಲ್ಪನೆ ಬಿಡಿ. ಒಂದು ವಾರದಲ್ಲಿ ನಿಮಗೆ ಗೊತ್ತಾಗುತ್ತದೆ. ಒಂದು ನಿರ್ಧಾರ ಆಗೋದಿದೆ. ಅವರು ಶ್ಯಾಡೋ ಅಲ್ಲ, ಹೈಕಮಾಂಡ್ ಏನು ಹೇಳ್ತಾರೋ ಅದನ್ನು ಕೇಳುತ್ತಾರೆ ಎಂದರು.
ಪಂಚಮಸಾಲಿ ಸಮಾಜಕ್ಕೆ ಅಷ್ಟೇ ಅಲ್ಲ, ಕೆಲವೊಂದು ಸಮಾಜಕ್ಕೆ ಅನ್ಯಾಯ ಆಗಿತ್ತು ನಿಜ. ಯಾವುದೇ ಸಮಾಜಕ್ಕೆ ಮೋಸ ಮಾಡಬಾರದು. ಮೋಸ ಮಾಡಿದ್ರೆ ಭಗವಂತ ಶಿಕ್ಷೆ ಕೊಟ್ಟೆ ಕೊಡ್ತಾನೆ. ಬಿಎಸ್‌ವೈ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಕಿತ್ತು. ನ್ಯಾ.ಸುಭಾಷ್ ಆಡಿ ನೇತೃತ್ವದಲ್ಲಿ ಕಮಿಟಿ ಮಾಡಿ ಸದಸ್ಯರ ನೇಮಕ ಮಾಡಿರಲಿಲ್ಲ. ಆಗ ಒಂದೂ ಮೀಟಿಂಗ್ ಆಗಲಿಲ್ಲ. ಆರು ತಿಂಗಳ ಸಮಯ ಪಡೆದು ಮೀಸಲಾತಿ ನೀಡದೆ ಮೋಸ ಮಾಡಿದ್ದಾರೆ. ಅದು ಶಾಪವಲ್ಲವೇ, ನಾವು ನಮ್ಮ ಸಮುದಾಯದ ಜೊತೆ ಬೇರೆ ಸಮುದಾಯಕ್ಕೂ ಮೀಸಲಾತಿ ಕೇಳ್ತಿದ್ದೇವೆ. ಯಾವುದೇ ಸಮಾಜಕ್ಕೆ ಮೀಸಲಾತಿ ಕೊಡಬಾರದು ಎಂದು ನಮ್ಮ ಹೋರಾಟ ಇಲ್ಲ ಎಂದರು.
'ಬೊಮ್ಮಾಯಿ ಮೇಲೆ ವಿಶ್ವಾಸವಿದೆ'
ಹಿಂದಿನ ಸಿಎಂ ಆರು ತಿಂಗಳಲ್ಲಿ ಮೀಸಲಾತಿ ಘೋಷಿಸೋದಾಗಿ ವಿಧಾನಸಭೆಯಲ್ಲಿ ಹೇಳಿದ್ದರು. ಸೆ.15ಕ್ಕೆ ಅವಧಿ ಮುಗಿದ ಮೇಲೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ಶ್ರೀಗಳ ಜೊತೆ ಮಾತನಾಡಿದ್ದಾರೆ. ಇಂದು ಬೆಳಗ್ಗೆ ಮನೆಗೆ ಕರೆಯಿಸಿ ನನ್ನ ಜೊತೆಯೂ ಮಾತನಾಡಿದ್ದಾರೆ. ಎಲ್ಲಾ ಸಮಾಜಕ್ಕೆ ನ್ಯಾಯ ಕೊಡ್ತಾರೆಂಬ ಭರವಸೆ ಇದೆ. ಹಿಂದುಳಿದ ಸಮಾಜದಲ್ಲಿ ಕೆಲವರು ಎಸ್ಸಿಗೆ ಹೋಗಬೇಕಂತಿದ್ದಾರೆ, ಕೆಲವರು ಎಸ್ಟಿಗೆ ಹೋಗಬೇಕಂತಿದ್ದಾರೆ. ಹಿಂದುಳಿದ ಆಯೋಗ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ನ್ಯಾ.ಸುಭಾಷ್ ಆಡಿ ನೇತೃತ್ವದ ಸಮಿತಿ ಇನ್ನೂ ಕ್ರಿಯಾಶೀಲ ಆಗಿಲ್ಲ. ಆ ಸಮಿತಿಗೆ ಇನ್ನೂ ಇಬ್ಬರ ಸದಸ್ಯರ ನೇಮಕ ಆಗಬೇಕು ಎಂದರು.
'ನಮ್ಮವರಿಂದಲೇ ಷಡ್ಯಂತ್ರ'