ಬೆಳಗಾವಿ:ದೇವಸ್ಥಾನ ಆವರಣ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಆರ್ಥಿಕ ನಿರ್ಬಂಧ ಹೇರಲು ಅವಕಾಶ ನೀಡುವುದಿಲ್ಲ ಎಂದಿದ್ದ ಬೆಳಗಾವಿ ಬಿಜೆಪಿ ಶಾಸಕ ಅನಿಲ್ ಬೆನಕೆ ಇದೀಗ ಉಲ್ಟಾ ಹೊಡೆದಿದ್ದಾರೆ. ಮೂರು ದಿನಗಳ ಹಿಂದೆ ಮಾಧ್ಯಮಗಳ ಎದುರು ಶಾಸಕ ಬೆನಕೆ, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ನಿರ್ಬಂಧ ಹೇರಲು ಕಾನೂನಿನಲ್ಲಿ ಅವಕಾಶ ಇಲ್ಲ. ಬೆಳಗಾವಿಯಲ್ಲಿ ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದಿದ್ದರು.
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲು ಬಿಡಲ್ಲ ಎಂದಿದ್ದ ಬಿಜೆಪಿ ಶಾಸಕ ಬೆನಕೆ ಯೂಟರ್ನ್
ಆರ್ಥಿಕ ನಿರ್ಬಂಧ ವಿಚಾರದ ಬಗ್ಗೆ ನನಗೆ ಸ್ವಲ್ಪ ಮಾಹಿತಿ ಇರಲಿಲ್ಲ, ನೇರವಾಗಿಯೇ ನಾನು ಒಪ್ಪಿಕೊಳ್ಳುತ್ತೇನೆ. ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳಿದ ಮೇಲೆ ಗೊತ್ತಾಗಿದೆ ಎಂದು ಶಾಸಕ ಬೆನಕೆ ತಿಳಿಸಿದ್ದಾರೆ.
ಬಿಜೆಪಿ ಶಾಸಕ ಅನಿಲ್ ಬೆನಕೆ
ಆದರೆ ಇಂದು ಶಾಸಕ ಅನಿಲ್ ಬೆನಕೆ ತಮ್ಮ ನಿಲುವನ್ನು ಬದಲಿಸಿದ್ದಾರೆ. ಇಂದು ಪ್ರತಿಕ್ರಿಯೆ ನೀಡಿದ ಶಾಸಕ ಬೆನಕೆ, ಆರ್ಥಿಕ ನಿರ್ಬಂಧ ವಿಚಾರದ ಬಗ್ಗೆ ನನಗೆ ಸ್ವಲ್ಪ ಮಾಹಿತಿ ಇರಲಿಲ್ಲ, ಇದನ್ನು ನೇರವಾಗಿಯೇ ನಾನು ಒಪ್ಪಿಕೊಳ್ಳುತ್ತೇನೆ. ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಹೇಳಿದ ಮೇಲೆ ಗೊತ್ತಾಗಿದೆ. ಮುಜರಾಯಿ ಕಾಯ್ದೆ ಪಾಸ್ ಮಾಡಿದವರು ಕಾಂಗ್ರೆಸ್ ನಾಯಕರು. ಹಿಂದೂಯೇತರ ವ್ಯಾಪಾರಸ್ಥರಿಗೆ ಅವಕಾಶ ಇಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆ ಕಾಯ್ದೆಯನ್ನು ನಾವಿಂದು ಫಾಲೋ ಮಾಡುತ್ತೇವೆ ಎಂದು ಶಾಸಕ ಬೆನಕೆ ತಿಳಿಸಿದ್ದಾರೆ.