ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಬಿಜೆಪಿ, ಎಂಇಎಸ್ ಭರ್ಜರಿ ರೋಡ್ ಶೋ - election nomination file

ಬೆಳಗಾವಿಯ ಜಿಲ್ಲೆಯ ವಿವಿಧ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು.

bjp-mes-road-show-in-belgaum-during-last-day-nomination
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಬೆಳಗಾವಿಯಲ್ಲಿ ಬಿಜೆಪಿ, ಎಂಇಎಸ್ ಭರ್ಜರಿ ರೋಡ್ ಶೋ

By

Published : Apr 20, 2023, 7:23 PM IST

ಬೆಳಗಾವಿ: ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಜಿಲ್ಲೆಯ‌ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿ ನಾಮಪತ್ರ ಸಲ್ಲಿಸಿದರು. ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್​, ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ್​ ನಗರದ ಧರ್ಮವೀರ ಸಂಭಾಜಿ ವೃತ್ತದಿಂದ ತೆರೆದ ವಾಹನದಲ್ಲಿ ರ್ಯಾಲಿ ನಡೆಸಿದರು.

ತ್ಯಾಗವೀರ ಶಿರಸಂಗಿ ಲಿಂಗರಾಜ ಕಾಲೇಜು ರಸ್ತೆ, ರಾಣಿ ಚೆನ್ನಮ್ಮಾಜಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದ ಇಬ್ಬರೂ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಮತ್ತಿತರು ಬಿಜೆಪಿ‌ ನಾಯಕರು‌ ಭಾಗಿಯಾಗಿದ್ದರು.

ಬೆಳಗಾವಿ ದಕ್ಷಿಣ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅಭ್ಯರ್ಥಿ ರಮಾಕಾಂತ ಕೊಂಡೂಸ್ಕರ್ ಮತ್ತು ಉತ್ತರ ಕ್ಷೇತ್ರದ ಎಂಇಎಸ್ ಅಭ್ಯರ್ಥಿ ಅಮರ ಯಳ್ಳೂರಕರ್ ಕೂಡ ನಗರದಲ್ಲಿ ಎತ್ತಿನ‌ ಗಾಡಿಯಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಮಹಾನಗರ ಪಾಲಿಕೆ ಕಚೇರಿಯಲ್ಲಿ ಅವರು ನಾಮಪತ್ರ ಸಲ್ಲಿಸಿದರು. ಕಿತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಕೂಡ ತೆರೆದ ವಾಹನದಲ್ಲಿ‌ ಅದ್ಧೂರಿ‌ ರ್ಯಾಲಿ ನಡೆಸಿ ತಮ್ಮ‌ ನಾಮಪತ್ರ ಸಲ್ಲಿಸಿದರು. ರಾಜ್ಯ ಬಿಜೆಪಿ‌ ಉಸ್ತುವಾರಿ‌ ಅರುಣ್​​ ಸಿಂಗ್ ಸೇರಿ ಇನ್ನಿತರ ಮುಖಂಡರು ಸಾಥ್ ನೀಡಿದರು.

ಬೆಳಗಾವಿ ಉತ್ತರ ಕಾಂಗ್ರೆಸ್ ಅಭ್ಯರ್ಥಿ ರಾಜು ಸೇಠ್ ಸರಳವಾಗಿ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ‌ ಶಾಸಕ ಸಹೋದರ ಫಿರೋಜ್ ಸೇಠ್ ಸಾಥ್ ಇದ್ದರು. ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಅಶೋಕ ಗೋವೇಕರ್, ಅಜೀಂ‌‌ ಪಟ್ವೇಗಾರ್, ಶ್ರೀನಿವಾಸ ತಳವಾರ, ಶಿವಗಂಗಾ ಕೆಂಪ, ಕಾಶಿಮರಾಮ್ ಚವ್ಹಾಣ, ಆಮನ್ ರಾಜು ಸೇಠ್, ಇಸ್ಮಾಯಿಲ್ ಮಗದುಮ್ಮ, ನಾಸಿರ್ ಹಟ್ಟಿಹೊಳಿ, ವಿಶಾಲ್ ಗಾಯಕವಾಡ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಇಂದು ಮುಗಿದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ: ನಾಳೆ ನಾಮಪತ್ರ ಪರಿಶೀಲನೆ

ABOUT THE AUTHOR

...view details