ಗೋಕಾಕ : ರಾಜ್ಯ ರಾಜಕೀಯದಲ್ಲಿ ಕೇಂದ್ರಬಿಂದುವಾಗಿರುವ ಗೋಕಾಕ್ ಮತಕ್ಷೇತ್ರದ ಉಪಚುನಾವಣೆ ದಿನೇದಿನೇ ಕುತೂಹಲ ಮೂಡಿಸುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಶಮನ ಮಾಡುವ ಕೆಲಸ ಶುರುವಾಗಿದೆ.
ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ: ಅಶೋಕ್ ಪೂಜಾರಿ ಮನೆಯಲ್ಲಿ ಗುಪ್ತ ಸಭೆ - ಅಶೋಕ ಪೂಜಾರಿ ಬಂಡಾಯ
ಗೋಕಾಕ್ ಉಪ ಚುನಾವಣೆ ಕಾವು ಸಾಕಷ್ಟು ರಾಜಕೀಯ ಹೈಡ್ರಾಮಾಗಳಿಗೆ ವೇದಿಕೆಯಾಗ್ತಿದೆ. ಅಶೋಕ ಪೂಜಾರಿ ಬಂಡಾಯ ಶಮನಕ್ಕೆ ಬಿಜೆಪಿ ಹರಸಾಹಸ ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಶೋಕ್ ಪೂಜಾರಿ ಮನೆಗೆ ಆಗಮಿಸಿ ಸಭೆ ನಡೆಸಿದರು.

BJP leaders meeting, ಬಿಜೆಪಿ ನಾಯಕರ ಸಭೆ
ಇಂದು ಮಧ್ಯಾಹ್ನ ಅಶೋಕ ಪೂಜಾರಿ ಅವರು ಕಾರ್ಯಕರ್ತರ ಸಭೆ ನಡೆಸುತ್ತಿದ್ದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕರಾದ ಎ ಎಸ್ ಪಾಟೀಲ್(ನಡಹಳ್ಳಿ), ವಿಶ್ವನಾಥ್ ಪಾಟೀಲ್ ಸೇರಿದಂತೆ ಇತರರು ಅವರ ಮನೆಗೆ ಆಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತವಾಗಿ ಸಭೆ ನಡೆಸಿದರು.
ಇಂದು ಅಶೋಕ ಪೂಜಾರಿ ಜೊತೆ ಸಭೆ ನಡೆಸಿದ ಬಿಜೆಪಿ ನಾಯಕರು
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಅಶೋಕ ಪೂಜಾರಿ ಮನೆಗೆ ಆಗಮಿಸಿ ಸಭೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
Last Updated : Nov 16, 2019, 9:36 PM IST