ಕರ್ನಾಟಕ

karnataka

ETV Bharat / state

ಬಿಜೆಪಿ ಹೈಕಮಾಂಡ್​​ ನನಗೆ ಸಚಿವ ಸ್ಥಾನ ನೀಡುತ್ತೆ: ಶ್ರೀಮಂತ ಪಾಟೀಲ್​​​​​​​ ವಿಶ್ವಾಸ - ಬೊಮ್ಮಾಯಿ ಸಚಿವ ಸಂಪುಟ

ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಆದ್ರೆ ಬೊಮ್ಮಾಯಿ ಸಂಪುಟದಿಂದ ಕೈಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಹೈಕಮಾಂಡ್​​ ಭರವಸೆ ನೀಡಿದೆ. ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಸಿಕ್ಕಿದ್ದು ಸಂತೋಷ ಉಂಟು ಮಾಡಿದೆ ಎಂದು ಶಾಸಕ ಶ್ರೀಮಂತ ಪಾಟೀಲ್​ ತಿಳಿಸಿದರು.

bjp-high-command-gives-me-a-ministerial-position
ಶ್ರೀಮಂತ ಪಾಟೀಲ್​​​​​​​

By

Published : Sep 3, 2021, 4:26 PM IST

ಚಿಕ್ಕೋಡಿ:ನನಗೆ ಯಾವುದೇ ಮಾಹಿತಿ ಇಲ್ಲದೆ, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಿಂದ ಸ್ಥಾನ ಕೈ ತಪ್ಪಿದೆ. ಮುಂಬರುವ ದಿನದಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಶಾಸಕ ಶ್ರೀಮಂತ ಪಾಟೀಲ್ ಹೇಳಿದರು.

'ಬಿಜೆಪಿ ಹೈಕಮಾಂಡ್​​ ನನಗೆ ಸಚಿವ ಸ್ಥಾನ ನೀಡುತ್ತೆ'

ಕಾಗವಾಡ ಮತಕ್ಷೇತ್ರದ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನನ್ನನ್ನು ಕೈಬಿಡಲಾಗಿದೆ. ಮುಂದೆ ಸಚಿವ ಸಂಪುಟದಲ್ಲಿ ನನಗೆ ಮಂತ್ರಿಗಿರಿ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದರು.

ಮಹಾರಾಷ್ಟ್ರ ಜೊತೆ ಒಪ್ಪಂದ:

ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನ ಸಿಕ್ಕಿದ್ದು ಸಂತೋಷ ಉಂಟುಮಾಡಿದೆ. ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿ ಬತ್ತಿ ಹೋಗುತ್ತದೆ. ಆ ಸಮಯದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ನಮಗೆ ನೀರು ಹರಿಸುವ ಯೋಜನೆ ಒಪ್ಪಂದ ಸದ್ಯದಲ್ಲೇ ಆಗುವುದರಿಂದ ನಮ್ಮ ಭಾಗಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ತಿಳಿಸಿದರು.

ಮರಾಠ ಮಹಾಸಭಾ ಸಿಎಂ ಭೇಟಿ ವಿಚಾರ:

ಮರಾಠ ಸಮುದಾಯದ ಹಲವಾರು ಬೇಡಿಕೆಗಳ ವಿಚಾರವಾಗಿ ಸಿಎಂ ಬೇಟಿ ಮಾಡಿದ್ದಾರೆ. ಕರ್ನಾಟಕ ಭಾಗದಲ್ಲಿ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಕಾರಣಕ್ಕೆ ಹೆಚ್ಚು ಆದ್ಯತೆ ನೀಡುವಂತೆ ಕೇಳಿಕೊಂಡಿದ್ದಾರೆ. ಜೊತೆ ನನಗೆ ಸಚಿವ ಸ್ಥಾನ ನೀಡುವಂತೆಯೂ ಸಿಎಂಗೆ ಮನವಿ ಸಲ್ಲಿಸಿದ್ದಾರೆಂದು ಹೇಳಿದರು.

ದೆಹಲಿ ಪ್ರವಾಸ:

ಕಳೆದ ಒಂದು ವಾರದ ಹಿಂದೆ ನಾನು ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ದೆಹಲಿಗೆ ಹೋಗಿದ್ದು ನೀಜ. ನಾವು ನಮ್ಮ ರಾಜ್ಯದ ಮುಖ್ಯಮಂತ್ರಿ ಜೊತೆ ಹೋಗಿದ್ದೆವು, ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ತಿಳಿಸಿದರು.

ಕೃಷ್ಣಾ ನದಿ ಪ್ರವಾಹ ಸರ್ಕಾರದಿಂದ ಪರಿಹಾರ ವಿತರಣೆ:

ಕೃಷ್ಣಾ ನದಿ ಪ್ರವಾಹದಿಂದ ಅಥಣಿ ಕಾಗವಾಡ ತಾಲೂಕಿನ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸಿಎಂ ಬೊಮ್ಮಾಯಿ ಬೆಳಗಾವಿಗೆ ಬಂದು ಸಮಗ್ರ ವರದಿ ಆಲಿಸಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಪರಿಹಾರ ವಿತರಣೆ ಮಾಡುತ್ತಿದೆ. ಕೆಲವರಿಗೆ ತಾಂತ್ರಿಕ ತೊಂದರೆಯಿಂದಾಗಿ ಪರಿಹಾರ ಸಿಕ್ಕಿಲ್ಲ. ಈ ವಾರದಲ್ಲಿ ಅವರಿಗೂ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ABOUT THE AUTHOR

...view details