ಚಿಕ್ಕೋಡಿ:ನಾನು ಯಡಿಯೂರಪ್ಪನವರ ಹಳೆ ಶಿಷ್ಯನಾಗಿರುವುದರಿಂದ ನನ್ನ ಮೇಲೆ ಬಿಎಸ್ವೈ ಅವರು ಮೃದು ಸ್ವಭಾವ ಹೊಂದಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಜೈನ ಸಮುದಾಯದಿಂದ ಸವದಿ ಅವರಿಗೆ ಬೆಂಬಲ ಸೂಚಿಸಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ:ಮೀನುಗಾರರಿಗೆ ದೊರೆಯಲಿದೆ 10 ಲಕ್ಷ ರೂ. ವಿಮೆ, ಲೀಟರ್ ಡೀಸೆಲ್‌ಗೆ 25 ರೂ. ಸಬ್ಸಿಡಿ: ರಾಹುಲ್ ಗಾಂಧಿ ಭರವಸೆ
''ಅಥಣಿಯಲ್ಲಿ ಲಕ್ಷ್ಮಣ ಸವದಿ ಹಾಗೂ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಅವರನ್ನು ಸೋಲಿಸ್ತೀನಿ ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪನವರು ಹೇಳಿದ್ದರು. ಅಂದು ಅಥಣಿಗೆ ಬಂದಾಗ ಶಿಷ್ಯನಾದ ನನ್ನ ಮೇಲೆ ಮರಳಿ ಮನಸಾಗಿ ಶೆಟ್ಟರ್ನನ್ನು ನಾನು ಸೋಲಿಸ್ತೀನಿ, ಸವದಿಯನ್ನು ನೀವು ಸೋಲಿಸಿ ಎಂದು ಮೃದು ಸ್ವಭಾವದಿಂದ ಹೇಳಿದ್ದಾರೆ. ಶಿವಯೋಗಿ ಅವರಿಗೆ ಒಳ್ಳೆಯ ಬುದ್ಧಿ ಕೊಟ್ಟಿರಬೇಕು'' ಎಂದು ತಿಳಿಸಿದರು.
ಇದನ್ನೂ ಓದಿ:"ಹೀಗೆ ಮಾತಾಡಿಯೇ ಕಾಂಗ್ರೆಸ್ ಈ ಮಟ್ಟಕ್ಕೆ ಬಂದಿದೆ": ಖರ್ಗೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು
ರಮೇಶ್ ಜಾರಕಿಹೊಳಿ ವಿರುದ್ಧ ಸವದಿ ತಿರುಗೇಟು: ''ಮುದ್ದಾಂ ನಾನು ಕೆರಳಬೇಕು ಎಂಬ ದುರುದ್ದೇಶದಿಂದ ಕೆಲವರು ಏನೋನೋ ಮಾತನಾಡುತ್ತಿದ್ದಾರೆ. ರಮೇಶ ಅಣ್ಣನವರೇ ನಾನು ಚುನಾವಣೆ ಮುಗಿಯುವವರೆಗೂ ಬಾಯಿ ಪಿಟಕ್ ಅನ್ನಂಗಿಲ್ಲ. ಅದಕ್ಕೆ ಬರುವ ಮೇ 13ರಂದು ನನ್ನ ಮತಕ್ಷೇತ್ರದ ಜನ ನಿಮಗೆ ಉತ್ತರ ಕೊಡ್ತಾರೆ'' ಎಂದರು.