ಬೆಳಗಾವಿ:ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿಯಾಗಲಿದೆ ಎಂದು ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ನಗರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ತುಂಬಿದ ನಾಲಾಯಕ್ ಸರ್ಕಾರವನ್ನು ಬದಲಾಯಿಸಲು ಜನ ಕಾತುರರಾಗಿದ್ದಾರೆ. ದೇಶ, ಕರ್ನಾಟಕದಲ್ಲಿ ಸರ್ಕಾರ ಬದಲಾವಣೆ ಆಗೋದು ಗೋಡೆ ಬರಹದಷ್ಟೇ ಸ್ಪಷ್ಟ ಎಂದರು.
ಸಚಿವರು ಸಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ, ಸಿಎಂ ಸಚಿವರ ಮೇಲೆ ಆರೋಪ ಮಾಡ್ತಾರೆ. ರಾಜ್ಯದ ಮಂತ್ರಿಗಳು ಕೇಂದ್ರ ಸಚಿವರ ಮೇಲೆ ಆರೋಪ ಹೊರಿಸ್ತಾರೆ. ಕೇಂದ್ರ ಸರ್ಕಾರದವರು ಇಲ್ಲಿಯ ಮಂತ್ರಿಗಳು ನಾಲಾಯಕ್ ಅಂತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಸತೀಶ್ ಜಾರಕಿಹೊಳಿ ಗೆಲುವಿನ ಬಳಿಕ ತನ್ನಷ್ಟಕ್ಕೆ ತಾನೇ ಕರ್ನಾಟಕ ಸರ್ಕಾರ ಬಿದ್ದು ಹೋಗುತ್ತದೆ. ಇದಾದ ಬಳಿಕ ಜನರ ಮತಗಳಿಂದ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ರಾಜ್ಯವನ್ನು ಕಾಂಗ್ರೆಸ್ ಮತ್ತೊಮ್ಮೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದರು.
ಹೈಕೋರ್ಟ್ನಲ್ಲಿ ಬಿಎಸ್‌ವೈ ವಿರುದ್ಧ ಮೂರು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸಿಎಂ ಹಾಗೂ ಅವರ ಕುಟುಂಬದ ಮೇಲೆ ಸಚಿವರು, ಶಾಸಕರು ಆರೋಪ ಮಾಡುತ್ತಿದಾರೆ. ರಾಜ್ಯದ ಆಡಳಿತ ಯಂತ್ರ ಸರಿಯಿಲ್ಲ. ಹೀಗಾಗಿ ಈ ಸರ್ಕಾರ ಅಧಿಕಾರದಲ್ಲಿ ಇರಬಾರದು ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ ಮುಳುಗುತ್ತಿರುವ ಹಡಗಲ್ಲ, ಉದಯಿಸುತ್ತಿರುವ ಸೂರ್ಯ: ರಣದೀಪ್ ಸಿಂಗ್ ಸುರ್ಜೇವಾಲ