ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆ ಬಳಿಕ ಬಿಜೆಪಿ ಸರ್ಕಾರಕ್ಕೂ ಸಮಸ್ಯೆ: ಸತೀಶ ಜಾರಕಿಹೊಳಿ‌

ಸಂಪುಟ ವಿಸ್ತರಣೆ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಈಗಾಗಲೇ ಸಾಕಷ್ಟು ವಿಳಂಬ ಆಗಿದೆ. ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲೂ ಸಮಸ್ಯೆ ಉದ್ಭವಿಸಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ.

Satish jarakiholi
ಮಾಜಿ ಸಚಿವ ಸತೀಶ ಜಾರಕಿಹೊಳಿ‌

By

Published : Feb 2, 2020, 5:15 PM IST

ಬೆಳಗಾವಿ:ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲೂ ಸಮಸ್ಯೆ ಉದ್ಭವಿಸಲಿದೆ. ಇದು ಸರ್ಕಾರದ ಮೇಲೂ ಪರಿಣಾಮ ಬೀರಲಿದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಈಗಾಗಲೇ ಸಾಕಷ್ಟು ವಿಳಂಬ ಆಗಿದೆ. ಯಾರಿಗೆ ಸಚಿವ ಸ್ಥಾನ ಕೊಡ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

ಮಹೇಶ್ ಕುಮಟ್ಟಳ್ಳಿ ಬಿಜೆಪಿ ಕಚೇರಿ ಕಸಗೂಡಿಸಲು ಸಿದ್ಧ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,‌ ಕಸ ಹೊಡಿಯಲೇಬೇಕು. ಒಂದು ಪಕ್ಷಕ್ಕೆ ಸೇರಿದ ಮೇಲೆ ಆ ಪಕ್ಷದ ಸಿದ್ಧಾಂತಕ್ಕೆ ಬದ್ದರಾಗಬೇಕು.

ಮಾಜಿ ಸಚಿವ ಸತೀಶ ಜಾರಕಿಹೊಳಿ‌

ಆಪರೇಷನ್ ಕಮಲ ಆದ ಮೇಲೆ ಪ್ರದೇಶವಾರು ಬ್ಯಾಲೆನ್ಸ್ ಮಾಡಲು ಆಗುವುದಿಲ್ಲ. ಸಿಎಂ ಯಡಿಯೂರಪ್ಪನವರು ಹೊರಗಿನಿಂದ ಬಂದವರ ಮರ್ಜಿಯಲ್ಲಿದ್ದಾರೆ. ಹೀಗಿದ್ದಾಗ ಜಿಲ್ಲಾವಾರು, ರಿಜಿನಲ್ ಬ್ಯಾಲೆನ್ಸ್ ಮಾಡಲು ಆಗಲ್ಲ. ಸಚಿವ ಸ್ಥಾನವನ್ನು ಮೂಲ ಬಿಜೆಪಿಗರಿಗೆ ಕೊಡಲು ಆಗುವುದಿಲ್ಲ. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರನ್ನು ಸಮಾಧಾನಪಡಿಸಲು ಮೂಲ ಬಿಜೆಪಿಗರನ್ನು ಯಡಿಯೂರಪ್ಪ ಕಡೆಗಣಿಸಲೇಬೇಕು. ಸಂಪುಟ ವಿಸ್ತರಣೆ ಆದ ಬಳಿಕ ಸಮಸ್ಯೆ ಆರಂಭವಾಗಲಿದೆ. ಸರ್ಕಾರದ ಮೇಲೆ ಕೂಡ ಪರಿಣಾಮ ಆಗಲಿದೆ ಎಂದರು.

ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಖಾತೆಗಾಗಿ ಕಳೆದ ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ‌ ಅಭಿವೃದ್ಧಿಗಾಗಿ ಖಾತೆ ಕೇಳುತ್ತಿಲ್ಲ ತಮ್ಮ ಹಿತಾಸಕ್ತಿಗೆ ಕೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಸಿಗದಿದ್ದಕ್ಕೆ ಬಂಡಾಯ ಎದ್ದಿದ್ದರು. ಜಲಸಂಪನ್ಮೂಲ ಖಾತೆ ಸಿಗದಿದ್ದರೆ ಈ ಸರ್ಕಾರಕ್ಕೂ ಸಮಸ್ಯೆ ಮಾಡುತ್ತಾರೆ. ದಿನಕ್ಕೊಂದು ಹೊಸ ಸಮಸ್ಯೆಯನ್ನು ಯಡಿಯೂರಪ್ಪನವರ ಮುಂದೆ ತರುತ್ತಾರೆ. ರಮೇಶ್ ಜಾರಕಿಹೊಳಿ‌ ಮೊದಲಿನಿಂದಲೂ ಟ್ರಬಲ್ ಮೇಕರ್ ಇದ್ದ ಹಾಗೆ. ಟ್ರಬಲ್ ಮಾಡ್ತಾನೆ ಇರ್ತಾನೆ ಯಡಿಯೂರಪ್ಪ ಎಷ್ಟು ಸಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು.

ABOUT THE AUTHOR

...view details