ಕರ್ನಾಟಕ

karnataka

ETV Bharat / state

ಅನರ್ಹರಿಂದಲೇ ಮೈತ್ರಿ ಸರ್ಕಾರ ‌ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ: ಸವದಿ - ಅನರ್ಹರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ: ಲಕ್ಷ್ಮಣ ಸವದಿ

ಅನರ್ಹ ಶಾಸಕರಿಂದಲೇ ಮೈತ್ರಿ ಸರ್ಕಾರ ‌ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಯಡಿಯೂರಪ್ಪ ಸಿಎಂ ಆಗಲು, ನಾನು‌ ಡಿಸಿಎಂ ಆಗಲು ಅನರ್ಹ ಶಾಸಕರೇ ಕಾರಣ‌ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಅನರ್ಹರಿಂದಲೇ ಮೈತ್ರಿ ಸರ್ಕಾರ ‌ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ: ಡಿಸಿಎಂ ಲಕ್ಷ್ಮಣ ಸವದಿ

By

Published : Nov 19, 2019, 7:29 PM IST

ಬೆಳಗಾವಿ:ಅನರ್ಹ ಶಾಸಕರಿಂದಲೇ ಮೈತ್ರಿ ಸರ್ಕಾರ ‌ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಯಡಿಯೂರಪ್ಪ ಸಿಎಂ ಆಗಲು, ನಾನು‌ ಡಿಸಿಎಂ ಆಗಲು ಅನರ್ಹ ಶಾಸಕರೇ ಕಾರಣ‌ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಅನರ್ಹರಿಂದಲೇ ಮೈತ್ರಿ ಸರ್ಕಾರ ‌ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ: ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, 2018ರಲ್ಲಿ ಅಥಣಿ ಕ್ಷೇತ್ರದಲ್ಲಿ ಮಹೇಶ ಕುಮಟಳ್ಳಿ ನನ್ನ ಎದುರಾಳಿಯಾಗಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಈಗ ನನ್ನ ಮೇಲಿದೆ. ಅವರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಲವರು ಮಂತ್ರಿಗಳಾಗಲು ಅನರ್ಹರೇ ಕಾರಣ. ಅನರ್ಹರಿಗೆ ಟಿಕೆಟ್ ಕೊಡುವುದು ಕನ್ಫರ್ಮ್ ಆದರೂ ಹೈಕಮಾಂಡ್ ನನ್ನನ್ನು ಡಿಸಿಎಂ ಮಾಡಿದೆ. ನನ್ನ ಮುಂದಿನ‌ ರಾಜಕೀಯ ‌ಭವಿಷ್ಯದ ನಿರ್ಧಾರವನ್ನು ಹೈಕಮಾಂಡ್ ನಾಯಕರು ‌ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ನಾನು ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ ಎಂದರು. ನನಗೆ ಅಥಣಿ ಹಾಗೂ ಕಾಗವಾಡ ಉಸ್ತುವಾರಿ ವಹಿಸಲಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಲ್ಲಿದ್ದ ಸಣ್ಣ-ಪುಟ್ಟ ಗೊಂದಲ ನಿವಾರಿಸಲಾಗಿದೆ. ಬಿಜೆಪಿಯ ಜಿಪಂ ಸದಸ್ಯ ಗುರು ದಾಸ್ಯಾಲ್ ಅಥಣಿ ಕ್ಷೇತ್ರದಿಂದ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಿದ್ದಾರೆ.‌ ಇವತ್ತು ಮಧ್ಯಾಹ್ನ ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಹೀಗಾಗಿ ಅವರು ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆಯಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದರು.

ಅನರ್ಹರನ್ನು ಸೋಲಿಸುವುದೇ ನನ್ನ ಗುರಿ ಎಂಬ ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರ್ಕಾರ ಉರಳಿಸಿದ್ದೇ ಈಗಿನ ಅನರ್ಹ ಶಾಸಕರು. ಹೀಗಾಗಿ ಹೆಚ್​ಡಿಕೆ ಅವರಿಗೆ ಬೇಸರದ ಜತೆಗೆ ಕೋಪ ಇದೆ. ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇಲ್ಲ ಎಂದು‌ ತಿರುಗೇಟು ಕೊಟ್ಟರು. ಡಿಕೆಶಿ ‌ಕೂಡ‌ ಉಪ ಸಮರದ ಪ್ರಚಾರಕ್ಕೆ ಬರ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಯಾರು ಬೇಕಾದರೂ ಬರಲಿ.‌ ಚುನಾವಣೆ ಎಂದಾಕ್ಷಣ ಎಲ್ಲ ಪಕ್ಷದ ನಾಯಕರು ಪ್ರಚಾರಕ್ಕೆ ಬರುವುದು ಸಾಮಾನ್ಯ.‌ ಇದರಲ್ಲಿ ವಿಶೇಷವೇನಿಲ್ಲ ಎಂದರು.

ABOUT THE AUTHOR

...view details