ಬೆಳಗಾವಿ : ನಗರದ ಕಾಲೇಜು ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಡಿ.5ರಂದು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯಕಾರಣಿ ಸಭೆ ಹಿನ್ನೆಲೆ ಕುಂದಾನಗರಿಯ ಪ್ರಮುಖ ಬೀದಿಗಳು ಈಗ ಕೇಸರಿಮಯವಾಗಿವೆ.
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ; ಕೇಸರಿಮಯವಾದ ಕುಂದಾನಗರಿ - functionary meeting in Belgaum
ಬಿಜೆಪಿ ಕಾರ್ಯಕಾರಣಿ ಸಭೆ ಹಿನ್ನೆಲೆ ನಗರದ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ, ಕೊಲ್ಲಾಪುರ ಸರ್ಕಲ್, ಅಂಬೇಡ್ಕರ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಧ್ವಜ, ಬ್ಯಾನರ್, ಪೋಸ್ಟರ್ಗಳು ರಾರಾಜಿಸುತ್ತಿವೆ.
ಬುಧವಾರ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರೊಂದಿಗೆ ನಗರದ ಚೆನ್ನಮ್ಮ ವೃತ್ತ, ಕಾಲೇಜು ರಸ್ತೆ, ಕೊಲ್ಲಾಪುರ ಸರ್ಕಲ್, ಅಂಬೇಡ್ಕರ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಧ್ವಜ, ಬ್ಯಾನರ್, ಪೋಸ್ಟರ್ಗಳನ್ನು ಹಾಕಲಾಗಿದೆ. ಇದರಿಂದ ಇಡೀ ಕುಂದಾನಗರಿ ಕೇಸರಿಮಯವಾಗಿದೆ.
ಇನ್ನು ಚೆನ್ನಮ್ಮ ಪುತ್ಥಳಿ ಸುತ್ತಲೂ ಬಿಜೆಪಿ ಪಕ್ಷದ ಧ್ವಜಗಳನ್ನು ಹಾಕಿರುವುದಕ್ಕೆ ಕೆಲ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದವು. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಚೆನ್ನಮ್ಮಾಜಿ ಸುತ್ತಲೂ ರಾಜಕೀಯ ಪಕ್ಷದ ಧ್ವಜ ಹಾಕುವ ಮೂಲಕ ಅದರ ಅಂದವನ್ನು ಕೆಡಿಸಲಾಗಿದೆ. ಈ ಕೂಡಲೇ ಅಲ್ಲಿನ ಬಿಜೆಪಿ ಧ್ವಜಗಳನ್ನು ತೆಗೆದು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.