ಕರ್ನಾಟಕ

karnataka

ETV Bharat / state

ಬಿಜೆಪಿ ಸರ್ಕಾರದಿಂದ ಮಾತ್ರ ನೀರು ಹರಿಸಲು ಸಾಧ್ಯ: ಜತ್ತ ಜನತೆಗೆ ಲಕ್ಷ್ಮಣ ಸವದಿ ಭರವಸೆ

ರಾಜ್ಯದಿಂದ ಮಹಾರಾಷ್ಟ್ರದ  ಜತ್ತ ತಾಲೂಕಿನ 44  ಹಳ್ಳಿಗಳಿಗೆ ನೀರು ಹರಿಸುವುದು ಬಿಜೆಪಿ ಸರ್ಕಾರ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ,  ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ, ಇಲ್ಲಿಯೂ ನಮ್ಮದೇ ಸರ್ಕಾರ. ಇನ್ನೂ ನಮ್ಮನ್ನು ಬಿಟ್ಟು ಈ ಭಾಗದಲ್ಲಿ ಯಾರೂ ನೀರು ಹರಿಸಲು ಸಾಧ್ಯವಿಲ್ಲ, ಬಿಜೆಪಿ ಸರ್ಕಾರದಿಂದ ಮಾತ್ರ ನೀರು ಹರಿಸಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮಾತನಾಡಿದ್ದಾರೆ

By

Published : Oct 17, 2019, 6:25 PM IST

ಅಥಣಿ:ರಾಜ್ಯದಿಂದ ಮಹಾರಾಷ್ಟ್ರದ ಜತ್ತ ತಾಲೂಕಿನ 44 ಹಳ್ಳಿಗಳಿಗೆ ನೀರು ಹರಿಸುವುದು ಬಿಜೆಪಿ ಸರ್ಕಾರ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ, ಇಲ್ಲಿಯೂ ನಮ್ಮದೇ ಸರ್ಕಾರ. ಇನ್ನೂ ನಮ್ಮನ್ನು ಬಿಟ್ಟು ಈ ಭಾಗದಲ್ಲಿ ಯಾರೂ ನೀರು ಹರಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಿನ್ನೆ ಜತ್ತ ತಾಲೂಕಿನ ಶಂಕ ಗ್ರಾಮ ದಲ್ಲಿ ಮಾತನಾಡಿದ ಅವರು, ತಾಲೂಕಿಗೆ ಕರ್ನಾಟಕ ದಿಂದ ಜತ್ತ ತಾಲೂಕಿನ 44 ಹಳ್ಳಿಗಳಿಗೆ ನೀರು ಹರಿಸುವುದು ಬಿಜೆಪಿ ಸರ್ಕಾರ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ, ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ, ಮಹಾರಾಷ್ಟ್ರದಲ್ಲೂ ನಮ್ಮದೇ ಸರ್ಕಾರ. ಇನ್ನೂ ನಮ್ಮನ್ನು ಬಿಟ್ಟು ಈ ಭಾಗದಲ್ಲಿ ಯಾರೂ ನೀರು ಹರಿಸಲು ಸಾಧ್ಯವಿಲ್ಲ, ಬಿಜೆಪಿ ಸರ್ಕಾರದಿಂದ ಮಾತ್ರ ನೀರು ಬರುವುದು ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದ್ದಾರೆ
ಮಹಾರಾಷ್ಟ್ರದ ಚುನಾವಣೆ ಘೋಷಣೆ ಬೆನ್ನಲ್ಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಅದರಲ್ಲೂ ನಮ್ಮ ರಾಜ್ಯದ ಉಪ ಮುಖ್ಯಮಂತ್ರಿಗಳು ಸದ್ಯ ಮಹಾರಾಷ್ಟ್ರದಲ್ಲಿ ಮುಕ್ಕಾಂ ಹೂಡಿದ್ದಾರೆ. ಪಕ್ಕದ ರಾಷ್ಟ್ರದ ಚುನಾವಣೆ ಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಚುನಾವಣೆ ಉಸ್ತುವಾರಿಯಾದ ಬೆನ್ನಲ್ಲೇ ಸಭೆ ಮೇಲೆ ಸಭೆ ನಡೆಯುತ್ತಿದೆ.

ಕಳೆದ ಬಾರಿ ಬೇಸಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಯಾಕೆ ನೀವು ಅಥಣಿ ಭಾಗದ ಕೃಷ್ಣಾ ನದಿ ನೀರು ತರಲಿಲ್ಲ. ತಂದ್ರೆ ನಾವೇ ನೀರು ತರುವುದು ಎಂದು ಭಾಷಣ ಮಾಡುವವರು , ರಾಜಕೀಯ ವಾಗಿ ನಿಮ್ಮನ್ನು ಬೆಳೆಸಿದ ಅಥಣಿ ಕಡೆಗಣಿಸಿ ಮತ್ತೆಲ್ಲಿಗೋ ನೀರು ತರುವುದು ಎಷ್ಟು ಸಮಂಜಸ ಎಂಬ ಆರೋಪ ಸಾರ್ವಜನಿಕರಿಂದ ಉದ್ಭವವಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯದ ನಡುವೆ ಈಗಾಗಲೇ ಭುಗಿಲೆದ್ದಿರುವ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣ. ಹಾಗೆಯೇ ಇನ್ನು ಸುಖಾಂತ್ಯ ಕಾಣದಿರುವ ಕರ್ನಾಟಕ ಮತ್ತು ಮಹದಾಯಿ ನಡುವಿನ ನದಿ ನೀರು ಹಂಚಿಕೆ ವಿವಾದ ಇರುವಾಗ ವೋಟಿಗಾಗಿ ಜನರ ಓಲೈಕೆ ಮಾಡುವುದರಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಹಸಿಯಾಗಿರುವ ಬೆನ್ನಲ್ಲೆ ಕರ್ನಾಟಕದ ನೀರು ಬೋರಾ ನದಿಗೆ ಹರಿಸಲು ಪ್ರಯತ್ನ,ರಾಜ್ಯದ ಜನರ ಹಿತಕ್ಕಿಂತ ಪಕ್ಷದ ಅಭ್ಯರ್ಥಿಯ ಗೆಲುವೆ ಮುಖ್ಯವಾಯ್ತಾ ಬಿಜೆಪಿಗೆ? ಎಂಬ ಪ್ರಶ್ನೆ ಎದ್ದಿದೆ.







ABOUT THE AUTHOR

...view details