ಬೆಳಗಾವಿ:ನಗರದ ಬೆಲ್ ಸಿಟಿ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ ದಳವಾಯಿ ನಿಧನರಾಗಿದ್ದಾರೆ.
ಬೆಲ್ ಸಿಟಿ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ ದಳವಾಯಿ ನಿಧನ - Dayananda Dalwai passes away
ಬೆಲ್ ಸಿಟಿ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ ದಳವಾಯಿ ನಿಧನರಾಗಿದ್ದಾರೆ.
![ಬೆಲ್ ಸಿಟಿ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ದಯಾನಂದ ದಳವಾಯಿ ನಿಧನ ದಯಾನಂದ ದಳವಾಯಿ ನಿಧನ](https://etvbharatimages.akamaized.net/etvbharat/prod-images/768-512-11:58:11:1596349691-kn-bgm-03-02-bella-md-savu-ka10029-02082020115707-0208f-1596349627-1110.jpg)
ದಯಾನಂದ ದಳವಾಯಿ ನಿಧನ
ಇಲ್ಲಿನ ಕುವೆಂಪು ನಗರ ಬಡಾವಣೆಯ ನಿವಾಸಿಯಾಗಿದ್ದ ದಯಾನಂದ ಅವರು ಕಳೆದ ಹಲವು ದಿನಗಳಿಂದ ಅಸ್ವಸ್ಥರಾಗಿದ್ದು, ಅವರನ್ನು ನಿನ್ನೆ ಸಂಜೆಯಷ್ಟೇ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಯೇ ಅವರು ಕುಸಿದು ಬಿದ್ದು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತರು ತಾಯಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಕೊರೊನಾ ಸೋಂಕು ತಗುಲಿತ್ತಾ ಎಂಬುದು ಪರೀಕ್ಷೆಯ ನಂತರವಷ್ಟೇ ತಿಳಿಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದರು.