ಕರ್ನಾಟಕ

karnataka

ETV Bharat / state

ಕೂದಲೆಳೆ ಅಂತರದಲ್ಲಿ ಬೈಕ್ ಸವಾರರು ಬಚಾವ್: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Belagavi
ರಸ್ತೆ ಅಪಘಾತ: ಸಿಸಿಟಿವಿ ದೃಶ್ಯ

By

Published : Aug 12, 2022, 2:04 PM IST

ಬೆಳಗಾವಿ:ದ್ವಿ-ಚಕ್ರ‌ ವಾಹನಕ್ಕೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದು ಚಕ್ರದಡಿ ಸಿಲುಕಿದ ಬೈಕ್​​ ಸವಾರರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ತಾಲೂಕಿನ ಸಿಂಧೋಳ್ಳಿ ಗ್ರಾಮದ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.

ರಸ್ತೆ ಅಪಘಾತ: ಸಿಸಿಟಿವಿ ದೃಶ್ಯ

ದ್ವಿ-ಚಕ್ರ‌ ವಾಹನಕ್ಕೆ ಬೆಳಗಾವಿಯಿಂದ ಜಮಖಂಡಿಗೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ‌. ಅಪಘಾತದಲ್ಲಿ ತಾಲೂಕಿನ ಬಸವನಕುಡಚಿ ಗ್ರಾಮದ ಸುಬಾಸ್ ಬೆಡಕೆ ಹಾಗೂ ಸುಧೀರ್ ಬೆಡಕೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಪಘಾತದ ಭಯಾನಕ ದೃಶ್ಯ ರಸ್ತೆ ಬದಿಯ ಹೋಟೆಲ್​​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾರಿಹಾಳ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹೈಫೈ ಜೀವನಕ್ಕಾಗಿ ಕಳ್ಳತನ: 12 ಬುಲೆಟ್​ ಎಗರಿಸಿ ಸಿಕ್ಕಿಬಿದ್ದ ಬಿಟೆಕ್ ವಿದ್ಯಾರ್ಥಿಗಳು

ABOUT THE AUTHOR

...view details