ಬೆಳಗಾವಿ: ಖಾಸಗಿ ಬೈಕ್ ಕಂಪನಿಯೊಂದು ನಗರದ ಕ್ಲಬ್ನಲ್ಲಿ ಆರೇಂಜ್ ಡೇ ಹೆಸರಿನಲ್ಲಿ ಬೈಕ್ ಸ್ಟಂಟ್ ಆಯೋಜಿಸಿತ್ತು. ಬೈಕ್ ರೇಸಿಂಗ್ ಹೇಗೆ ನಡೆಯುತ್ತೆ, ರೇಸಿಂಗ್ ಟ್ರ್ಯಾಕ್ ಹೇಗಿರುತ್ತೆ, ರೇಸಿಂಗ್ ವೇಳೆ ಯಾವ ರೀತಿ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುವುದರ ಜೊತೆಗೆ ಸ್ಥಳೀಯ ರೇಸರ್ಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಧೂಳೆಬ್ಬಿಸಿದ ರೈಡರ್ಸ್ ಸ್ಟಂಟ್.. ಬೆರಗಾದ ಕುಂದಾನಗರಿಯ ಬೈಕ್ ಪ್ರಿಯರು..
ರೇಸ್ಗೂ ಮುನ್ನ ವ್ಹೀಲಿಂಗ್ನಲ್ಲೇ ಡಿಫ್ರೆಂಟ್ ಸ್ಟಂಟ್ ಮಾಡಿ ರೈಡರ್‌ಗಳು ಗಮನ ಸೆಳೆದರು. ಇನ್ನುಳಿದಂತೆ ಸ್ಟ್ರೀಟ್ ರೇಸಿಂಗ್, ಸೂಪರ್ ಸ್ಪೋರ್ಟ್ಸ್, ಫ್ಲಡ್ ಲೈಟ್ ರೇಸಿಂಗ್ ಆ್ಯಕ್ಷನ್ ಮಾಡಿ ರೈಡರ್‌ಗಳು ಸೈ ಎನಿಸಿಕೊಂಡರು.
ರಾಜ್ಯ, ನೆರೆ ರಾಜ್ಯಗಳ ಬೈಕ್ ರೇಸರ್‌ಗಳು ಸ್ಟಂಟ್‌ರೇಸ್ ಮಾಡಿ ಧೂಳೆಬ್ಬಿಸಿದರು. ರೈಡರ್ಗಳ ಬೈಕ್ ಸ್ಟಂಟಗಳಿಗೆ ಕುಂದಾನಗರಿಯ ಬೈಕ್ ಪ್ರಿಯರು ಬೆರಗಾದರು. ನಗರದ ಬೆಳಗಾವಿ ಕ್ಲಬ್‌ನಲ್ಲಿಯೇ ಚಿಕ್ಕ ರೇಸಿಂಗ್ ಟ್ರ್ಯಾಕ್ ಮಾಡಿ ರೇಸ್ ಮಾಡಲಾಯಿತು. ಟ್ರ್ಯಾಕ್ನಲ್ಲಿ ನಿಪುಣ ರೈಡರ್‌ಗಳು ತಮ್ಮ ನೈಪುಣ್ಯತೆ ಪ್ರದರ್ಶನ ಮಾಡುವುದರ ಜೊತೆಗೆ ಮೊದಲ ಬಾರಿ ರೇಸಿಂಗ್ಗೆ ಬಂದವರಿಗೆ ಸ್ಫೂರ್ತಿ ನೀಡಿದರು.
ರೇಸ್ಗೂ ಮುನ್ನ ವ್ಹೀಲಿಂಗ್ನಲ್ಲೇ ಡಿಫ್ರೆಂಟ್ ಸ್ಟಂಟ್ ಮಾಡಿ ರೈಡರ್‌ಗಳು ಗಮನ ಸೆಳೆದರು. ಇನ್ನುಳಿದಂತೆ ಸ್ಟ್ರೀಟ್ ರೇಸಿಂಗ್, ಸೂಪರ್ ಸ್ಪೋರ್ಟ್ಸ್, ಫ್ಲಡ್ ಲೈಟ್ ರೇಸಿಂಗ್ ಆ್ಯಕ್ಷನ್ ಮಾಡಿ ರೈಡರ್‌ಗಳು ಸೈ ಎನಿಸಿಕೊಂಡರು.