ಕರ್ನಾಟಕ

karnataka

ETV Bharat / state

ಬೈಕ್​ಗಳು ಮುಖಾಮುಖಿ ಡಿಕ್ಕಿ...  ಸ್ಥಳದಲ್ಲೇ ಒಬ್ಬನ ಸಾವು - ಅಥಣಿ

ಗಾಯಗೊಂಡ ಸುನಿಲ್​ಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಹಾರಾಷ್ಟ್ರದ ಮಿರಜ್​​ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​ಗಳು ಮುಖಾಮುಖಿ ಡಿಕ್ಕಿ

By

Published : May 9, 2019, 3:41 PM IST

ಚಿಕ್ಕೋಡಿ: ಅಥಣಿ - ಸಾವಳಗಿ ರಸ್ತೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಥಣಿ ತಾಲೂಕಿನ ನಂದಗಾಂವ ಕ್ರಾಸ್ ಬಳಿ ನಡೆದಿದೆ.

ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಬಾಳಪ್ಪ ಭೀಮಪ್ಪ ಮದಲಮಟ್ಟಿ (60) ಮೃತ ವ್ಯಕ್ತಿ, ದೇಸಾಯರಟ್ಟಿಯ ಸುನಿಲ್ ಮಹದೇವ್ ಬೋಸಲೆ (33) ಗಾಯಗೊಂಡ ವ್ಯಕ್ತಿ. ಬಾಳಪ್ಪ ಅಥಣಿಯಿಂದ ಸ್ವಗ್ರಾಮಕ್ಕೆ ತೆರಳುವ ವೇಳೆ ಹಾಗೂ ಸುನೀಲ್, ಕಟ್ಟಿಗೇರಿಯಿಂದ ಅಥಣಿ ಕಡೆಗೆ ಆಗಮಿಸುವಾಗ ಈ ಘಟನೆ ಸಂಭವಿಸಿದೆ.

ಗಾಯಗೊಂಡ ಸುನಿಲ್​ಗೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಹಾರಾಷ್ಟ್ರದ ಮಿರಜ್​​ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details