ಚಿಕ್ಕೋಡಿ(ಬೆಳಗಾವಿ):ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉಗಾರ ಕೆಚ್ ಹಾಗೂ ಉಗಾರ ಬಿಕೆ ಮಧ್ಯದಲ್ಲಿರುವ ರತ್ನಾ ಗಾರ್ಡನ್ ಬಳಿ ನಡೆದಿದೆ.
ಬೈಕ್ ಸ್ಕಿಡ್ ಆಗಿ ಸವಾರ ಸಾವು - ಬೈಕ್ ಸ್ಕಿಡ್ ಆಗಿ ಸವಾರ ಸಾವು
ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಉಗಾರ ಬಿಕೆ ತಾಲೂಕಿನಲ್ಲಿ ನಡೆದಿದೆ.
ಬೈಕ್ ಸವಾರ ಉಗಾರ ಬಿಕೆ ಗ್ರಾಮದಿಂದ ಉಗಾರ ಕೆಹೆಚ್ ಕಡೆ ಹೋಗುವಾಗ ನಸುಕಿನ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೈಕ್ ಸವಾರ ಯಾರು ಎಂದು ತಿಳಿದು ಬಂದಿಲ್ಲ. ಈತನ ವಯಸ್ಸು ಸುಮಾರು 40-45 ಆಗಿದ್ದು, 5.4 ಇಂಚು ಎತ್ತರ, ಗೋಧಿ ಕೆಂಪು ಮೈ ಬಣ್ಣ ಇದೆ.
ಈತ ತಿಳಿ ಗುಲಾಬಿ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತ ಕೆಂಪು ಕಪ್ಪು ಮಿಶ್ರಿತ ಪ್ಯಾಶನ್ ಪ್ರೋ ಬೈಕ್ ಹೊಂದಿದ್ದು, ಯಾರಿಗಾದರೂ ಈತನ ಬಗ್ಗೆ ಗೊತ್ತಿದ್ದಲ್ಲಿ ಕಾಗವಾಡ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದ್ದಾರೆ. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.