ಕರ್ನಾಟಕ

karnataka

ETV Bharat / state

ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗೆ ಬೈಕ್​​ ಡಿಕ್ಕಿ: ಓರ್ವ ಸಾವು - ಚಿಕ್ಕೋಡಿಯಲ್ಲಿ ಬೈಕ್​ ಅಪಘಾತ

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ನಿಲ್ಲಿಸಿದ್ದ ಕಬ್ಬಿನ ಟ್ರ್ಯಾಕ್ಟರ್​ಗೆ ದ್ವಿಚಕ್ರ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ. ಬೈಕ್​ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ನಡೆದಿದೆ.

bike accident in chikkodi
ಕಬ್ಬು ತುಂಬಿದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ

By

Published : Jan 24, 2020, 2:19 PM IST

Updated : Aug 9, 2022, 4:31 PM IST

ಚಿಕ್ಕೋಡಿ: ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ನಿಲ್ಲಿಸಿದ್ದ ಕಬ್ಬಿನ ಟ್ರ್ಯಾಕ್ಟರ್​ಗೆ ದ್ವಿಚಕ್ರ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾನೆ. ಬೈಕ್​ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಬಳಿ ನಡೆದಿದೆ.

ಕಬ್ಬು ತುಂಬಿದ ಟ್ರ್ಯಾಕ್ಟರ್​ಗೆ ಬೈಕ್ ಡಿಕ್ಕಿ

ಬೆಳಗಾವಿ ತಾಲೂಕು ಕಡೋಲಿ ಗ್ರಾಮದ ಕಿರಣ ಯಶವಂತ ಭಜಂತ್ರಿ (20) ಮೃತ ಯುವಕನಾಗಿದ್ದಾನೆ. ಬಂಬರಗೆ ಗ್ರಾಮದ ಅಶೋಕ ಸುರೇಶ ಮ್ಯಾಗೇರಿ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಹತ್ತಿರಗಿ ಟೋಲ್‌ನಲ್ಲಿ ಕೆಲಸಕ್ಕೆಂದು ಹೋಗುವಾಗ ಈ ಘಟನೆ ಸಂಭವಿಸಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 9, 2022, 4:31 PM IST

ABOUT THE AUTHOR

...view details