ಕರ್ನಾಟಕ

karnataka

ETV Bharat / state

ದೇವರ ದರ್ಶನಕ್ಕೆ ಬಂದು ಬಸ್​​ಗೆ ಡಿಕ್ಕಿಹೊಡೆದ ಬೈಕ್ ಸವಾರ ಸಾವು - ಚಿಕ್ಕೋಡಿ ಅಪರಾಧ ಸುದ್ದಿ

ಕೆಎಸ್ಆರ್​ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕಿನ ಮಿರಜ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ಪಟ್ಟಣದ ನಿವಾಸಿ ರಾಜು ನಾಯಕ ಎಂದು ಗುರುತಿಸಲಾಗಿದೆ.

ಬೈಕ್ ಬಸ್ ಮುಖಾಮುಖಿ ಡಿಕ್ಕಿ

By

Published : Nov 13, 2019, 5:44 AM IST

ಚಿಕ್ಕೋಡಿ: ಕೆಎಸ್ಆರ್​ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕು ಗಡಿಭಾಗದ ಮಿರಜ್​ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಜ್​ ಪಟ್ಟಣದ ನಿವಾಸಿ ರಾಜು ನಾಯಕ (46) ಮೃತಪಟ್ಟ ವ್ಯಕ್ತಿ. ಕರ್ನಾಟಕದಲ್ಲಿನ ದೇವರ ದರ್ಶನ ಮಾಡಿ ಮಹಾರಾಷ್ಟ್ರದ ಕಡೆಗೆ ವಾಪಸ್​ ಹೋಗುವಾಗ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯು ಕಾಗವಾಡ - ಮಿರಜ್​ ರಸ್ತೆಯ ಮಾರ್ಗ ಮಧ್ಯದಲ್ಲಿ ಸಂಭವಿಸಿದೆ.

ಗವಾಡ - ಮಿರಜ್​ ರಸ್ತೆಯ ಮಾರ್ಗ ಮಧ್ಯದಲ್ಲಿ ಸಂಭವಿಸಿದ ಅಪಘಾತ

ರಾಜ್ಯದ ಸಂಕೇಶ್ವರ ಡಿಪೋಕ್ಕೆ ಸೇರಿದ್ದ ಬಸ್​​, ಮಹಾರಾಷ್ಟ್ರದಿಂದ ಕರ್ನಾಟಕದತ್ತ ಬರುವ ವೇಳೆ ಘಟನೆ ನಡೆದಿದೆ. ಮಿರಜ್ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details