ಬೆಳಗಾವಿ:ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಭೀಕರ ರಸ್ತೆ ಅಪಘಾತ: ಒಂದೇ ಬೈಕ್ನಲ್ಲಿ ಹೋಗ್ತಿದ್ದ ನಾಲ್ವರ ಪೈಕಿ ಇಬ್ಬರ ಸಾವು - ಗಂಭೀರ ಗಾಯ
ಒಂದೇ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ ಇಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಭೀಕರ ರಸ್ತೆಯ ಅಪಘಾತ;ನಾಲ್ವರ ಪೈಕಿ ಇಬ್ಬರ ದುರ್ಮರಣ
ತಾಲೂಕಿನ ಹಳೇಗುಡಗನಟ್ಟಿ ಗ್ರಾಮದ ಸಂಜು ಭರಮಾ ಗಸ್ತಿ, ಭಜರಂಗಿ ಭರಮಾ ಗಸ್ತಿ ಮೃತಪಟ್ಟವರು ಎನ್ನಲಾಗಿದೆ. ಭರಮಾ ಯಲ್ಲಪ್ಪ ಗಸ್ತಿ, ಸಾವಿತ್ರಿ ಭರಮಾ ಗಸ್ತಿ ಗಂಭೀರ ಗಾಯಗೊಂಡಿದ್ದು, ಇವರಿಬ್ಬರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ.